ಕಾರ್ಕಳ, ನ.3: : ಮಾಳ ಹುಕ್ರಟ್ಟೆ ಫಾಲ್ಸ್ನಲ್ಲಿ ಪಂಚಾಯತ್ ಪಿಡಿಓ ಹಾಗೂ ಅವರ ಸ್ನೇಹಿತರು ಮೋಜಿನಲ್ಲಿ ನಿರತರಾಗಿದ್ದ ಸಂದರ್ಭ ಸ್ಥಳೀಯ ಬಾಲಕರೊಂದಿಗೆ ಜಗಳಕ್ಕಿಳಿದ ಪರಿಣಾಮ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದು ಪ್ರಕರಣ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲಿ ಇತ್ಯರ್ಥವಾದ ಕುರಿತು ವರದಿಯಾಗಿದೆ.
ನ. 1ರಂದು ಪಂಚಾಯತಿಯೊಂದರ ಪಿಡಿಓ ಹಾಗೂ ಅವರ ಸ್ನೇಹಿತರು ಪಾರ್ಟಿ ಮಾಡಲೆಂದು ಮಾಳದ ಹುಕ್ರಟ್ಟೆ ಫಾಲ್ಸ್ಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಬಾಲಕರೊಂದಿಗೆ ಮಾತಿಗೆ ಮಾತು ಬೆಳೆದು ಜಗಳಕ್ಕಿಳಿದರು ಎನ್ನಲಾಗಿದೆ. ಬಾಲಕರು ಈ ವಿಚಾರವನ್ನು ಮನೆಯವರಿಗೆ ಮತ್ತು ಸ್ಥಳೀಯರಿಗೆ ತಿಳಿಸಿದ್ದು, ತಕ್ಷಣವೇ ಧಾವಿಸಿ ಬಂದ ಅನೇಕರು ಪಿಡಿಓ ಮತ್ತವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪರಸ್ಪರ ಮಾತುಕತೆ ನಡೆಸಿ ಇತ್ಯರ್ಥಪಡಿಸಲಾಗಿದೆ.
