Homeದೇಶಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಬಂಧನ

Related Posts

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಬಂಧನ

ಮುಂಬಯಿ, ನ.4 : ಕಳೆದ ಕೆಲವು ಸಮಯದಿಂದ ಮಹಾರಾಷ್ಟ್ರ ಸರಕಾರದ ಜೊತೆಗೆ ಗುದ್ದಾಡುತ್ತಿದ್ದ ರಿಪಬ್ಲಿಕ್‌ ಟಿವಿ ವಾಹಿನಿಯ ಸಂಪಾದಕ ಅರ್ನಾಬ್‌ ಗೋಸ್ವಾಮಿಯವರನ್ನು ಮುಂಬಯಿ ಪೊಲೀಸರು ಬೂಧವಾರ ನಸುಕಿನ ಹೊತ್ತು ದಿಧೀರ್‌ ಎಂದು ಬಂಧಿಸಿದ್ದಾರೆ. ಅರ್ನಾಬ್‌ ಮೇಲೆ ಟಿಆರ್‌ ಪಿ ತಿರುಸಿರುವುದು ಸೇರಿದಂತೆ ಸಾಕಷ್ಟು ಪ್ರಕರಣಗಳು ಇದ್ದರೂ ಈ ಬಂಧನವಾಗಿರುವುದು ಮಾತ್ರ ಎರಡು ವರ್ಷ ಹಿಂದೆ ಸಂಭವಿಸಿದ ಒಂದು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್ನುವುದು ಗಮನಾರ್ಹ ವಿಚಾರ.
53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ಅವರನ್ನು ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ನಸುಕಿನ ಹೊತ್ತು ಅರ್ನಬ್ ಗೋಸ್ವಾಮಿ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಲು ಮುಂದಾದರು. ಆಗ ಮಾತಿನ ಚಕಮಕಿ ನಡೆದಿದೆ, ಪೊಲೀಸರು ಗೋಸ್ವಾಮಿ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದೆ.
ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಪೊಲೀಸರು ಯತ್ನಿಸಿದರು. ಅಲ್ಲದೆ ತಮ್ಮ ಪತ್ನಿ, ಪುತ್ರ, ಅತ್ತೆ-ಮಾವಂದಿರ ಮೇಲೆ ಕೂಡ ಹಲ್ಲೆ ನಡೆಸಲು ಯತ್ನಿಸಿದರು. ರಿಪಬ್ಲಿಕ್ ಟಿವಿಯಲ್ಲಿ ಬರುತ್ತಿರುವ ವಿಡಿಯೊ ಪ್ರಸಾರದಲ್ಲಿ ಪೊಲೀಸರು ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಂತರ ಪೊಲೀಸ್ ವ್ಯಾನಿನಲ್ಲಿ ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
2018ರ ಮೇ ತಿಂಗಳಲ್ಲಿ ಇಂಟೀರಿಯರ್ ಡಿಸೈನರ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಅದರಲ್ಲಿ ಬಾಕಿ ಉಳಿದ 5.4 ಕೋ.ರೂ. ಹಣವನ್ನು ರಿಪಬ್ಲಿಕ್ ಟಿವಿ ಸಂಪಾದಕ ಗೋಸ್ವಾಮಿ ನೀಡುತ್ತಿಲ್ಲ, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದರು.
ಅರ್ನಬ್ ಮೇಲೆ ಈ ಹಿಂದೆ 2 ಕೇಸು: ಈ ಹಿಂದೆ ಅರ್ನಬ್ ಗೋಸ್ವಾಮಿ ಮೇಲೆ ಪ್ರಚೋದನಾಕಾರಿ ಹೇಳಿಕೆ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೇಸು ದಾಖಲಾಗಿತ್ತು. ಪಾಲ್ಘಾರ್ ನಡೆದ ಸಾಧುಗಳ ಹತ್ಯೆ ಘಟನೆ ಮತ್ತು ಬಾಂದ್ರಾ ನಿಲ್ದಾಣದ ಜನದಟ್ಟಣೆ ಘಟನೆ ವರದಿಗೆ ಸಂಬಂಧಿಸಿದಂತೆ ಮುಂಬೈಯ ಎನ್. ಎಂ. ಜೋಷಿ ಮಾರ್ಗ್ ಹಾಗೂ ಪಾಯ್ದುನಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಜಾವಡೇಕರ್‌ ಖಂಡನೆ
ಅರ್ನಾಬ್‌ ಗೋಸ್ವಾಮಿ ಬಂಧನವನ್ನು ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಹಲ್ಲೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಖಂಡಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ನೀಡುವ ಗೌರವ ಇದಲ್ಲ. ಇಂದಿನ ಘಟನೆ ತುರ್ತು ಪರಿಸ್ಥಿತಿ ಸಂದರ್ಭವನ್ನು ನೆನಪು ಮಾಡಿಸುತ್ತಿದೆ, ಆ ಸಮಯದಲ್ಲಿ ಮಾಧ್ಯಮ, ಪತ್ರಿಕೆಗಳನ್ನು ಈ ರೀತಿ ಕಾಣಲಾಗುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!