ನರ್ಗೀಸ್ ರೊಂದಿಗೆ 16 ಚಿತ್ರಗಳಲ್ಲಿ ರೊಮಾನ್ಸ್ ನಡೆಸಿದ ವಿವಾಹಿತ ರಾಜ್ ಕಪೂರ್ ಗೆ ಅಸಲಿಯಾಗಿಯೂ ಆಕೆಯ ಮೇಲೆ ಮೋಹ ಉಂಟಾಗಿತ್ತು. ಅವರಿಬ್ಬರ ಜೋಡಿಯ ಪ್ರಣಯ ಪರದೆಯಲ್ಲಿ ಎಷ್ಟು ಜನಪ್ರಿಯವಾಯಿತೋ ಅಷ್ಟೇ ಅವರ ನಿಜ ಬದುಕಿನ ಪ್ರಣಯ ಕೂಡಾ ಪ್ರಚಾರ ಗಿಟ್ಟಿಸಿಕೊಂಡಿತು.ತಾನು ಮುಸ್ಲಿಂ ಆಗಿದ್ದ ಕಾರಣ ಮದುವೆಗೆ ತೊಂದರೆಯಾದೀತು ಎಂಬ ಕಾರಣಕ್ಕೆ ಆಕೆ ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರನ್ನು ಭೇಟಿಯಾಗಿ ಸಹಕರಿಸುವಂತೆ ಕೇಳಿಕೊಂಡಿದ್ದರು.ಆದರೆ ಆಕೆಯ ಆಸೆ ಕೈಗೂಡಲಿಲ್ಲ. ಪ್ರಣಯ ಭಗ್ನಗೊಂಡ ಬಳಿಕ ಆಕೆ ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಕಪೂರ್ ತನ್ನ ಆರ್.ಕೆ.ಸ್ಟುಡಿಯೋದ ಕಚೇರಿಯಲ್ಲಿ ನರ್ಗೀಸ್ ರ ಫೋಟೋ ಇಟ್ಟುಕೊಂಡಿದ್ದರು. ನರ್ಗೀಸ್- ರಾಜ್ ಕಪೂರ್ ಅವರ ಪ್ರೇಮಾಂಕುರದ ಸಮಯ ನರ್ಗೀಸ್ ಗೆ ಕೇವಲ 19 ವರ್ಷ ವಯಸ್ಸಾಗಿತ್ತು.
ಏಳಿಂಜೆ ನಾಗೇಶ್,ಮುಂಬಯಿ-98929 80750






























































