ಮೀರಾ ಗಂಗಾಧರ ಚಿತ್ತಾಲ ನಿಧನ

ಮುಂಬಯಿ, ಸೆ. 24 : ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ  ಅವರ ಬಾಳ ಸಂಗಾತಿ ಮೀರಾ ಗಂಗಾಧರ ಚಿತ್ತಾಲ ಅವರು ಸೆ. 22 ರಂದು ಅಮೆರಿಕದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ 91 ನೆಯ ವಯಸ್ಸಿನಲ್ಲಿ ತೀರಿಕೊಂಡರು.  ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ ಸ್ಥೈರ್ಯವಾಗಿದ್ದರು. ಚಿತ್ತಾಲರು ಇವರ ಕುರಿತು ಬರೆದ “ಹೆಂಡತಿಗೆ” ಕವಿತೆ ( ಹರಿವ ನೀರಿದು , ೧೯೭೦) ಕಾವ್ಯಾಸಕ್ತರಿಗೆ ಪರಿಚಿತ.  ( ಮುಗಿಲುಗನಸುಗಳಲ್ಲೆ ತಲ್ಲೀನವಾದ ಮನ, ನಿನ್ನ ಆಗಮನಕೆ ನೆಳಕಿಳಿದು ನಲಿದಿತ್ತು,  ಬೆನ್ನೆಲುಬ ಬಲವಾಯ್ತು  ನಿನ್ನ ಸಹವಾಸ ..) ವಿದೇಶದಲ್ಲಿ ನೆಲೆಸಿರುವ ಪುತ್ರ,  ಇಬ್ಬರು ಪುತ್ರಿಯರನ್ನು  ಅವರು ಅಗಲಿದ್ದಾರೆ. ಚಿತ್ತಾಲ ಬಳಗದ ಹಿರಿಯ “ಸಂಪರ್ಕ”ವೊಂದು  ಕಣ್ಮರೆಯಾದಂತಾಗಿದೆ.  







































































































































error: Content is protected !!
Scroll to Top