ಕಾಲು ಕಳೆದುಕೊಂಡರೂ ಕಾಯಕ ಬಿಡದ ಕಾರ್ಕಳದ ಆಟೋ ಚಾಲಕ

ಕಾರ್ಕಳ : ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಬಗೆ ಹೇಗೆ ಎಂಬುವುದನ್ನು ಸಾಬೀತು ಮಾಡಿತೋರಿಸಿದ್ದಾರೆ ಕಾಲು ಕಳೆದುಕೊಂಡಿರುವ ಕಾರ್ಕಳದ ಓರ್ವ ಹಿರಿಯ ಆಟೋ ಚಾಲಕ. ಕಾಲು ಕಳೆದುಕೊಂಡ ಬಳಿಕವೂ ಒಂದಿನಿತೂ ದೃತಿಗೆಡದ ಇವರು ತನ್ನ ಛಲ, ಪ್ರಯತ್ನ ಮೂಲಕ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಈ ಆಟೋ ರಾಜನ ಸಾಹಸಮಯ ಜೀವನ, ಹುಮ್ಮಸ್ಸು ಅನೇಕರಿಗೆ ಸ್ಫೂರ್ತಿ, ಮಾದರಿ.

ಹೌದು, ಕಾರ್ಕಳ ಪೇಟೆಯಲ್ಲಿ ಲವಲವಿಕೆಯಿಂದಲೇ ಆಟೋ ಓಡಿಸುವ ಹಿರಿಯ ವ್ಯಕ್ತಿಯೊಬ್ಬರು ಕಾಣಸಿಗುತ್ತಾರೆ. ಇವರ ಹೆಸರು ಗಣೇಶ್ ದೇವಾಡಿಗ. ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ಸಮೀಪದಲ್ಲೇ ಇವರ ಮನೆ. ಕಳೆದ 36 ವರ್ಷಗಳಿಂದ ಆಟೋ ಓಡಿಸುವ ಇವರು ಬೆಳಗ್ಗೆ 5:30ವರೆಯಿಂದ ಸಂಜೆ 7 ಗಂಟೆ ತನಕ ಆಟ ಓಡಿಸುತ್ತಾರೆ.

62 ವರ್ಷದ ಗಣೇಶ್ ದೇವಾಡಿಗರು ಒಂದೂವರೆ ವರ್ಷಗಳ ಹಿಂದೆ ಸಕ್ಕರೆ ಕಾಯಿಲೆಗೆ ತುತ್ತಾದರು. ಹೀಗಾಗಿ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಯಿತು. ಇದರಿಂದ ತಮ್ಮ ಮೊಣಕಾಲಿನಿಂದ ಕಾಲನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಗಣೇಶರಿಗೆ ಬಂದೊದಗಿತು. ಆ ಬಳಿಕ ಕೃತಕ ಕಾಲು ಜೋಡಣೆ ಮಾಡಲಾಗಿ, ಇದೀಗ ಅದೇ ಕೃತಕ ಕಾಲಿನಲ್ಲಿ ಆಟೋ ಓಡುಸುತ್ತಿದ್ದಾರೆ.

ನೆರವು ನೀಡಿದವರು
ಕೃತಕ ಕಾಲು ಜೋಡಣೆ ಸೇರಿದಂತೆ ಚಿಕಿತ್ಸೆಗಾಗಿ ಗಣೇಶ್ ಅವರಿಗೆ ಸುಮಾರು 2. ಲಕ್ಷ ರೂ. ವೆಚ್ಚ ತಗುಲಿದೆ. ಅವಿವಾಹಿತರಾಗಿರುವ ಇವರಿಗೆ ಅಷ್ಟೊಂದು ಹಣ ಭರಿಸುವುದು ಕಷ್ಟಕರವಾಗಿತ್ತು. ಈ ವೇಳೆ ಗೆಳೆಯರು, ಸಂಬಂಧಿಕರು ಧೈರ್ಯ ತುಂಬಿದ್ದರು ಎಂದು ಸ್ಮರಿಸುತ್ತಾರೆ ಗಣೇಶ್. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 17 ಸಾವಿರ, ಆಳ್ವಿನ್ ಲೂಯಿಸ್, ಮಾಜಿ ಶಾಸಕ ಗೋಪಾಲ ಭಂಡಾರಿ, ಉದಯಶೆಟ್ಟಿ ಮುನಿಯಾಲು, ಪವನ್ ಜ್ಯುವೆಲ್ಲರ್ಸ್‍ನ ಸತೀಶ್ ಆಚಾರ್ಯ, ಸೊವರಿನ್‍ನ ಶಾಂತರಾಮ ಕಾಮತ್, ಉಮೇಶ್ ರಾವ್ ಬಜಗೋಳಿ ಸೇರಿದಂತೆ ಅನೇಕರು ಆರ್ಥಿಕವಾಗಿ ಸಹಕರಿಸಿದ್ದಾರೆ ಎಂದು ನೆನಪು ಮಾಡಿಕೊಳ್ಳುತ್ತಾರೆ ಗಣೇಶ್ ಅವರು.

ಕಷ್ಟ ಬಂದಾಗ ಕೊರಗದೇ, ಎದೆಗುಂದದ ಧೈರ್ಯದಿಂದಿರಬೇಕು. ನೋವು, ನಲಿವು ಜೀವನದಲ್ಲಿ ಸಹಜವಾಗಿದ್ದು, ನೋವನ್ನು ಮರೆತು ಸಂತೋಷದಿಂದ ಬದುಕು ಸಾಗಿಸುವುದು ಹೇಗೆಂಬುವುದನ್ನು ನಿರೂಪಿಸಬೇಕು.
ಗಣೇಶ್ ದೇವಾಡಿಗ
ಆಟೋ, ಚಾಲಕ







































































































































error: Content is protected !!
Scroll to Top