ಕಾರ್ಕಳ,ಸೆ.16 : ನಿವೃತ್ತ ಉಪ ತಹಶೀಲ್ದಾರ್, ಕುಕ್ಕುಂದೂರು ಗ್ರಾಮದ ನಿವಾಸಿ ಕೆ. ಹಯಾತ್ ಖಾನ್ (91) ಸೆ. 15 ರಂದು ನಿಧನ ಹೊಂದಿದರು.
ಕಾರ್ಕಳ ತಾಲೂಕಿನ ಜಮಾಯಿತುಲ್ ಫಾಲ್ಹ್ ಘಟಕದ ಸ್ಥಾಪಕ ಅಧ್ಯಕ್ಷರಾಗಿ, ಇತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಪತ್ನಿ, ಇಬ್ಬರು ಪುತ್ರರು, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.



































































