ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ- ಬದುಕು ಬದಲಾಯಿಸಿದ ಒಂದು ಏಟು

1942ರಲ್ಲಿ ‘ ಜಂಗ್’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.ಭಗವಾನ್ ದಾದಾ ನಟಿ ಲಲಿತಾ ಪವಾರ್ (ಸಾಗರ್ ಅವರ ರಾಮಾಯಣ ಧಾರಾವಾಹಿಯ ಮಂಥರೆ)ಗೆ ಕೋಪದಲ್ಲಿ ಜೋರಾಗಿ ಹೊಡೆಯುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.ಭಗವಾನ್ ದಾದಾ ಎಷ್ಟು ಜೋರಾಗಿ ಕಪಾಳಕ್ಕೆ ಹೊಡೆದರೆಂದರೆ ಆಕೆ ನೆಲಕ್ಕೆ ಬಿದ್ದುಬಿಟ್ಟರು.ಮುಖದ ಒಂದು ಭಾಗ ಪಕ್ಷಪಾತಕ್ಕೊಳಗಾಯಿತು.ಜತೆಗೆ ಒಂದು ಕಣ್ಣಿನ ದೃಷ್ಟಿಯೂ ಹೋಯಿತು.

ಇದರೊಂದಿಗೆ ಆಕೆಗೆ ನಾಯಕಿ ನಟಿಯಾಗುವ ಅವಕಾಶವೂ ತಪ್ಪಿ ಹೋಯಿತು.25ರ ಹರೆಯದಲ್ಲೇ ತನ್ನ ಸರಿಸಮಾನ ಪ್ರಾಯದ ದೇವಾನಂದ್,ದಿಲೀಪ್ ಕುಮಾರ್ ರಂತಹ ನಟರ ತಾಯಿಯ ಪಾತ್ರವನ್ನು ಮಾಡಬೇಕಾಗಿ ಬಂತು.ಒಂದು ರೀತಿಯಲ್ಲಿ ಈ ಅನಾಹುತವಾದುದು ಒಳ್ಳೆಯದೇ ಆಯಿತು.ಅತ್ತೆ,ತಾಯಿಯಂತಹ ಪೋಷಕ ಪಾತ್ರಗಳು ವಿಪುಲವಾಗಿ ದೊರೆಯತೊಡಗಿದವು.ನಾಯಕಿ ಪಾತ್ರವಾದರೆ ಸೀಮಿತದಲ್ಲಿ ಲಭಿಸುತ್ತಿದ್ದವು ಎನ್ನುತ್ತಿದ್ದರು ಲಲಿತಾ ಪವಾರ್.

ಏಳಿಂಜೆ ನಾಗೇಶ್ -98929 80750







































error: Content is protected !!
Scroll to Top