ಕಾರ್ಕಳ, ಸೆ.13 : ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಚೈತನ್ಯ ಮಿತ್ರ ಮಂಡಳಿ ಹಾಳೆಕಟ್ಟೆ ಕಲ್ಯಾ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಹಾಳೆಕಟ್ಟೆ ಕಲ್ಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ. 13ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇಲ್ಲಿ ಜರುಗಿದ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮದಲ್ಲಿ ವಾಲಿಬಾಲ್ ಪಂದ್ಯಾಟವನ್ನು ಗಿನ್ನಿಸ್ ದಾಖಲೆಗಾರ ಸುರೇಂದ್ರ ಆಚಾರ್ಯ ಇವರು ಉದ್ಘಾಟಿಸಿದರು. ಅಖಿಲ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಉಡುಪಿ ಘಟಕ ಕೋಶಾಧಿಕಾರಿ ಯತೀಶ್ ಕಲ್ಯಾ, ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷ ಅನೂಪ್ ಆಚಾರ್ಯ ಉಪಸ್ಥಿತರಿದ್ದರು.
ಕಲ್ಯಾದಲ್ಲಿ ಫಿಟ್ ಇಂಡಿಯಾ ವಾಲಿಬಾಲ್ ಪಂದ್ಯಾಟ



















