ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್ ಕಾರ್ಯಕ್ರಮ


ಕಾರ್ಕಳ : ಶೈಕ್ಷಣಿಕ ಚಟುವಟಿಕೆಯೊಂದಿಗೆ ಸಾಮಾಜಿಕ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿರುವ ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಲಯನ್ಸ್‌ ರೀಜನ್ ಚೇರ್ ಪರ್ಸನ್ ಉದಯ ಕುಮಾರ್ ಹೆಗ್ಡೆ ಹೇಳಿದರು.
ಅವರು ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್‍ನ ಸನದು ಪ್ರದಾನ ದಿನಾಚರಣೆಯಲ್ಲಿ ಮಾತನಾಡಿದರು. ಲಯನ್ ಅಧ್ಯಕ್ಷ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ, ಲಿಯೋ ಜಿಲ್ಲಾ ಅಧ್ಯಕ್ಷ ಐನಿಶ್ ಮಿರಾಂದಾ, ಮುಂಡ್ಕೂರು -ಕಡಂದಲೆ ಕ್ಲಬ್‍ನ ಸ್ಥಾಪಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ ಕಾಮತ್ ಕಾರ್ಯಕ್ರಮ ನಿರೂಪಿಸಿದರು.









































































































error: Content is protected !!
Scroll to Top