ಜನ್‌ಧನ್‌ ಖಾತೆಗೆ ಆರು ವರ್ಷ

ದಿಲ್ಲಿ, ಆ. 28: ದೇಶದ ಪ್ರತಿಯೊಬ್ಬರು ಬ್ಯಾಂಕ್‌  ಖಾತೆ ಹೊಂದಿರಬೇಕು ಹಾಗೂ ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೂ ಹಣಕಾಸು ಒಳಗೊಳ್ಳುವಿಕೆ ಪ್ರಕ್ರಿಯೆಯಲ್ಲಿ  ಸಹಭಾಗಿಗಳಾಗಬೇಕೆಂಬ ಮಹಾನ್‌ ಉದ್ದೇಶಗಳೊಂದಿಗೆ ನರೇಂದ್ರ  ಮೋದಿ ಸರ್ಕಾರ ಪ್ರಾರಂಭಿಸಿದ ಪ್ರಧಾನಮಂತ್ರಿ ಜನಧನ್‌  ಯೋಜನೆಗೆ ಇಂದಿಗೆ (ಆ.28) ಆರು ವರ್ಷವಾಯಿತು.

  ಪ್ರತಿಯೊಬ್ಬರು ಹಣಕಾಸು ಸೇರ್ಪಡೆಯಲ್ಲಿ ಒಳಗೊಳ್ಳಬೇಕು ಎನ್ನುವುದನ್ನು  ಸರ್ಕಾರ ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಿದೆ.ಜನಧನ್‌  ಮೂಲಕ ಸರ್ಕಾರದ ಎಲ್ಲ ಸಬ್ಸಿಡಿಗಳು, ಪಿಂಚಣಿಗಳು ಹಾಗೂ ಇನ್ನಿತರ ಹಣಕಾಸಿನ ನೆರವುಗಳು ನೇರವಾಗಿ ಬಡವರ ಬ್ಯಾಂಕ್‌ ಖಾತೆಗೆ ಬರುತ್ತಿವೆ. ಈ ಮೂಲಕ ಜನ್‌ಧನ್‌  ಖಾತೆ ಮಧ್ಯವರ್ತಿಗಳ ಹಾವಳಿಯನ್ನು ನಿವಾರಿಸಿದೆ. ಒಂದು ರೂಪಾಯಿಯೂ ಸೋರಿಕೆಯಾಗದಂತೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ನೇರವಾಗಿ ತಲುಪಿಸಲು ಜನ್‌ಧನ್‌  ಖಾತೆಯಿಂದಾಗಿ ಸಾಧ್ಯವಾಗಿದೆ.

 ಇಷ್ಟು ಮಾತ್ರವಲ್ಲದೆ  ಬಡವರಿಗೆ ಚಿಕ್ಕಪುಟ್ಟ ಉಳಿತಾಯಗಳನ್ನು ಮಾಡಲು ಜನ್‌ಧನ್‌  ಖಾತೆ ಪ್ರೋತ್ಸಾಹ ನೀಡುತ್ತಿದೆ.  ಬಡವರು ಈ ಖಾತೆಗಳ ಮೂಲಕ ತಮ್ಮ ಚಿಕ್ಕಪುಟ್ಟ ಉಳಿತಾಯವನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರಲು ಸಾಧ್ಯವಾಗಿದೆ.  ಬಡವರನ್ನು ಲೇವಾದೇವಿದಾರರ ಹಿಡಿತದಿಂದ ಪಾರು ಮಾಡುವಲ್ಲಿ ಜನ್‌ಧನ್‌  ಖಾತೆ ನೆರವಾಗಿದೆ.ಜನ್‌ಧನ್‌  ಖಾತೆದಾರರಿಗೆ ರುಪೇ ಡೆಬಿಟ್‌ ಕಾರ್ಡ್‌ ಗಳನ್ನೂ ನೀಡಲಾಗಿದೆ.

ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014 , ಆ. 15 ರಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದರು. ಆ 28 ರಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  





























































































































error: Content is protected !!
Scroll to Top