1955ರಲ್ಲಿ ‘ ದೇವದಾಸ್ ‘ ಚಿತ್ರದ ನಟನೆಗಾಗಿ ವೈಜಯಂತಿಮಾಲಾಗೆ ಉತ್ತಮ ಪೋಷಕ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಯಿತು.ಈ ಚಿತ್ರದಲ್ಲಿ ನನ್ನದು ನಾಯಕಿ ಪಾತ್ರ.ಹಾಗಿರುವಾಗ ನನಗೆ ಪೋಷಕ ನಟಿ ಪ್ರಶಸ್ತಿ ಹೇಗೆ ನೀಡಲಾಗುತ್ತಿದೆ ಎಂದು ಕೇಳಿ ಆಕೆ ಆ ಪ್ರಶಸ್ತಿಯನ್ನು ತಿರಸ್ಕರಿಸಿದರು.’ನಯಾದೌರ್’ನಲ್ಲಿ ಮತ್ತೆ ವೈಜಯಂತಿಮಾಲಾಗೆ ದಿಲೀಪ್ ಕುಮಾರ್ ಜೊತೆ ನಟಿಸುವ ಅವಕಾಶ ಲಭಿಸಿತು. ಈ ಚಿತ್ರಕ್ಕಾಗಿ ಮೊದಲು ಅಶೋಕ್ ಕುಮಾರ್ ಮತ್ತು ಮಧುಬಾಲಾರನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು.ಅಶೋಕ್ ಕುಮಾರ್ ಒಪ್ಪಿಕೊಳ್ಳಲಿಲ್ಲ.ನಂತರ ಅಶೋಕ್ ಕುಮಾರ್ ಜಾಗಕ್ಕೆ ದಿಲೀಪ್ ಕುಮಾರ್ ಅವರನ್ನು ಹಾಕಿಕೊಳ್ಳಲಾಯಿತು.ದಿಲೀಪ್ ಜೊತೆ ನಟಿಸಬಾರದೆಂದು ಮಧುಬಾಲಾರ ತಂದೆ ಬಲವಾದ ವಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ಆ ಪಾತ್ರ ವೈಜಯಂತಿಮಾಲಾ ಪಾಲಾಯಿತು.ಈ ಪಾತ್ರಕ್ಕಾಗಿ ವೈಜಯಂತಿಗೆ ಫಿಲ್ಮ್ ಫೇರ್ ಉತ್ತಮ ನಟಿ ಪ್ರಶಸ್ತಿ ದೊರೆಯಿತು.ವೈಜಯಂತಿಮಾಲಾರಿಂದಾಗಿ ರಾಜ್ ಕಪೂರ್ ಅವರ ಪತ್ನಿ ಮಕ್ಕಳೊಂದಿಗೆ ಮನೆ ತೊರೆದು ನಟರಾಜ್ ಹೊಟೇಲಿನಲ್ಲಿ ವಾಸಿಸತೊಡಗಿದ್ದರೆನ್ನಲಾಗುತ್ತಿತ್ತು.
ಏಳಿಂಜೆ ನಾಗೇಶ್ (98929 80750)































































