ಪದವಿ ಅಂತಿಮ ವರ್ಷದ ಪರೀಕ್ಷೆ ನಡೆಯಲೇ ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ದಿಲ್ಲಿ,ಆ. 28:ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಈ ವರ್ಷ ನಡೆಸಲೇ ಬೇಕು. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೊರೊನಾ ವೈರಸ್‌ ಕಾರಣ ಪರೀಕ್ಷೆ ದಿನಾಂಕವನ್ನು ಸೆ.30ರ ಆಚೆಗೂ ಮುಂದೂಡಬಹುದು. ಆದರೆ ಅಂತಿಮ ವರ್ಷದ ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬಾರದು ಎಂದು ಹೇಳಿದೆ.

ಅಂತಿಮ ವರ್ಷದ ಪರೀಕ್ಷೆ ನಡೆಯಲೇ ಬೇಕು. ಆದರೆ ರಾಜ್ಯಗಳು ಪರೀಕ್ಷೆ ದಿನಾಂಕವನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧರಿಸಬಹುದು ಎನ್ನುವುದು ಸುಪ್ರೀ ಕೋರ್ಟಿನ ತೀರ್ಪಿನ ತಾತ್ಪರ್ಯ.

ಮಹಾರಾಷ್ಟ್ರದ ಆದಿತ್ಯ ಠಾಕ್ರೆ ನೇತೃತ್ವದ ಯುವ ಸೇನೆ ಸೇರಿ ಹಲವು ಸಂಘಟನೆಗಳು ಕೊರೊನಾ ಭೀತಿ ಕಾರಣ ಅಂತಿಮ ಪದವಿಗೆ ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಬೇಕೆಂದು ಆಗ್ರಹಿಸಿದ್ದವು. ಸುಪ್ರೀ ತೀರ್ಪಿನಿಂದ ಅವರಿಗೆ ತೀರ್ವ ಹಿನ್ನಡೆಯಾಗಿದೆ.





























































































































error: Content is protected !!
Scroll to Top