ಕಾರ್ಕಳ : ಮುಂಡ್ಕೂರು ಜಾರಿಗೆಕಟ್ಟೆಯಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ. 28ರ ಮುಂಜಾನೆ ನಡೆದಿದೆ. ಲಾರೆನ್ಸ್ ಕುಟಿನ್ಹೋರವರ ಪತ್ನಿ ಸಿಂತಿಯಾ (51) ಎಂಬವರೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಆರೋಗ್ಯ ಸಮಸ್ಯೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಲು ನಿರ್ಧರಿಸಿರುವುದಾಗಿ ಡೆತ್ ನೋಟ್‌ನಲ್ಲಿ ತಿಳಿಸಿರುತ್ತಾರೆ. ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ.
































































