ಕೆ.ಪಿ.ಎಸ್.ಸಿ ಯಲ್ಲಿ 523 ಗ್ರೂಪ್-ಸಿ ಹುದ್ದೆಗಳು

 ಬೆಂಗಳೂರು, ಆ.28:  ಕೆ.ಪಿ.ಎಸ್.ಸಿ.ಯು  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 523  ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು    ಅರ್ಜಿಗಳನ್ನು ಆಹ್ವಾನಿಸಿದೆ. ಈ ಕೆಳಗೆ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ-20/08/2020

ಕೊನೆಯ ದಿನಾಂಕ-19-09-2020

ವಿದ್ಯಾರ್ಹತೆ – ಪದವಿ ಮತ್ತು ಪದವಿ ಪೂರ್ವ

ಕನಿಷ್ಟ ವಯೋಮಿತಿ-18 ವರ್ಷ

ಅರ್ಜಿ ಶುಲ್ಕ- ಸಾಮಾನ್ಯ ಅಭ್ಯರ್ಥಿ-600 ರೂ, ಹಿಂದುಳಿದ ವರ್ಗ-300, ಮಾಜಿ ಸೈನಿಕರು-50, ಪ.ಜಾ ಪ.ಪಂ, ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ  ಶುಲ್ಕ ವಿನಾಯಿತಿ ಇದೆ.( ಕಡ್ಡಾಯವಾಗಿ ಪ್ರಕ್ರಿಯೆ ಶುಲ್ಕ ಪಾವತಿಸಬೇಕು)

ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸಿದರೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಒಂದೇ ಶುಲ್ಕ ಪಾವತಿಸತಕ್ಕದ್ದು.

ನೇಮಕಾತಿ ವಿಧಾನ- ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳು ಮಾತ್ರ

ಸ್ಪರ್ಧಾತ್ಮಕ ಪರೀಕ್ಷೆ-  ಒಟ್ಟು ಪತ್ರಿಕೆಗಳು -2 

ಪತ್ರಿಕೆ-1 – ಸಾಮಾನ್ಯ ಜ್ಞಾನ ( ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಬಾರತದ ಸಂವಿಧಾನ, ಮಾನಸಿಕ ಸಾಮರ್ಥ್ಯ, ನಿತ್ಯಜೀವನದ ಸಂಗತಿಗಳು, ಕ್ರೀಡೆ, ರಾಜಕೀಯ, ಅಂತಾರಾಷ್ಟ್ರೀಯ ಪ್ರಮುಖ ವಿದ್ಯಮಾನಗಳು, ಪ್ರಚಲಿತ ಘಟನೆಗಳು)-100 ಅಂಕಗಳು

     ಪತ್ರಿಕೆ -2 – ಸಂವಹನ ಪತ್ರಿಕೆ ( ಸಾಮಾನ್ಯ ಕನ್ನಡ- 35 ಅಂಕ, ಸಾಮಾನ್ಯ  ಇಂಗ್ಲೀಷ್- 35 ಅಂಕಗಳು, ಕಂಪ್ಯೂಟರ್ ಜ್ಞಾನ- 30 ಅಂಕಗಳು)

  ಪರೀಕ್ಷೆಗಳು– ಪದವಿ ಮಟ್ಟದ ಹುದ್ದೆಗಳಿಗೆ ಒಂದು ದಿನ ಪರೀಕ್ಷೆ ಮತ್ತು ಪದವಿ ಪೂರ್ವ ಮಟ್ಟದ ಹುದ್ದೆಗಳಿಗೆ ಒಂದು ದಿನ ಪರೀಕ್ಷೆ ನಡೆಯುತ್ತದೆ. ಎಲ್ಲ  ಹುದ್ದೆಗಳಿಗೆ ಇದೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಪರೀಕ್ಷಾ ದಿನಾಂಕ- ಆಯೋಗವು ಪ್ರಕಟಿಸುತ್ತದೆ.

 ಆಯ್ಕೆ ವಿಧಾನ- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರನ್ನು ನಿಯಮಾನುಸಾರ ಆಯ್ಕೆಮಾಡಲಾಗುತ್ತದೆ. ಕಟ್ ಆಫ್ ಅಂಕಗಳನ್ನು ಆಯೋಗವು ಬಿಡುಗಡೆ ಮಾಡುತ್ತದೆ.































































































































































error: Content is protected !!
Scroll to Top