ಕಾರ್ಕಳ, ಆ. 28: ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ವತಿಯಿಂದ ಸನ್ಮಾನಿಸಲಾಗುವುದು. ಆ.29 ರಂದು ಸಂಜೆ 4.30ಕ್ಕೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನಸೇವೆ ಮಾಡಿ ಸಾರ್ವಜನಿಕರ ಪ್ರೀತಿ, ಗೌರವ,ಅಭಿಮಾನಕ್ಕೆ ಪಾತ್ರರಾದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಆಡಳಿತ ಅಧಿಕಾರಿಗಳು, ಪ್ರಭಾರ ಶುಶ್ರೂಷಕ ಅಧೀಕ್ಷಕರು, ಶುಶ್ರೂಕಿಯರು, ಕೊರೊನಾ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕಿ, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಶಿಯನ್, ಆರ್ ಎನ್ ಟಿ ಸಿ ಪಿ, ಕ್ಷ-ಕಿರಣ, ಪಿಸಿಯೋಥೆರಪಿ, ಕಚೇರಿ ಸಿಬ್ಬಂದಿಗಳು, ಆಪ್ತ ಸಮಾಲೋಚಕರು, ಆಂಬುಲೆನ್ಸ್ ಚಾಲಕರು, 108 ಆಂಬುಲೆನ್ಸ್, ಹಾಗೂ ಡಿ ಗ್ರೂಪ್ ನೌಕರರು ಸೇರಿ ಒಟ್ಟು 116 ಸಿಬ್ಬಂದಿಗಳನ್ನು ಗಣೇಶೋತ್ಸವ ಸಮಿತಿ ಅಭಿನಂದಿಸಲಿದೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷ ಶುಭದ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































































