ನಿತ್ಯ ಭವಿಷ್ಯ – 28-08-2020

ಮೇಷ

ಕುಜ ಜನ್ಮದಲ್ಲಿದ್ದಾನೆ “ಕ್ಷತತನು: ಕ್ರೂರ:..ಎಂಬಂತೆ ಪಿತ್ತ ಪ್ರಕೃತಿ ಶೀಘ್ರ ಕೋಪಿಯೂ ಆಗುತ್ತೀರಿ.ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಿ. ಮಾಸ್ಕ್ ಧರಿಸದೆ ಹೊರಗೆ ಹೋಗಲೇ ಬೇಡಿ.ತಲೆಗೆ ಗಾಯವಾಗುವ ಸಾಧ್ಯತೆ ಇದೆ. ಶುಕ್ರ ಸುಖ ಸ್ಥಾನದಲ್ಲಿರುವಾಗ “ಸುವಾಹನ ಸುಮಂದಿರಾ ಭರಣ ವಸ್ತ್ರ ಗಂಧಮ್ ಸುಖೆ ಎಂದಿದ್ದಾರೆ. ವಾಹನ್ ಗೃಹ ಆಭರಣ ವಸ್ತ್ರ ಸಕಲ ಭೋಗ ಭಾಗ್ಯಗಳು ಲಭಿಸಲಿವೆ “ಅಸುತೋ ಧನವರ್ಜಿತ ಸ್ರೀಕೋಣೆ” ಅಂದರೆ ರವಿ ಪಂಚಮದಲ್ಲಿರುವಾಗ ಸಂತಾನ ಸಂಪತ್ತಿನ ಕೊರತೆ ಇರುತ್ತದೆ.

ವೃಷಭ

ಸುಖ ಸ್ಥಾನದಲ್ಲಿ ರವಿ ಬುಧ ಇರುವುದರಿಂದ ಚತುರ:  ಶೀಲವಾನ್ ಮಾನೀ ಎಂದಿದ್ದಾರೆ. ಅಂದರೆ ಶೀಲವಂತ ಗುಣವಂತ ಚತುರ ನೀವಾಗುತ್ತೀರಿ.ಕಲಹ ಕ್ಲೇಶದ ಅನುಭವವೂ ಬರಲಿದೆ.ಅಷ್ಟಮದಲ್ಲಿ ಗುರುವಿರಲು ಸುಖರಹಿತನು ದೇವ-ಬ್ರಹ್ಮ ದ್ವೇಷಿ ಎಂದಿದ್ದಾರೆ. ಆದರೆ ಧೀರ್ಘಾಯುಷ್ಯ ಕಫ ಪ್ರಕೃತಿ ಇರುತ್ತದೆ. ಅವಮಾನ ನಿಂದನೆಯ ಮಾತು ಇರುತ್ತದೆ.

ಮಿಥುನ

ರಾಹು ಜನ್ಮದಲ್ಲಿದ್ದಾನೆ “ಅಚಿರಾಯು: ರೋಗಾನ್ವಿತ:  ಅಂದರೆ ಅನಾರೋಗ್ಯ ಮತ್ತು ದೇಹದಲ್ಲಿ ನಂಜು ವಿಷ ಬಾಧೆ ಇರುತ್ತದೆ ಔಷಧಗಳ ಪಾರ್ಶ್ವ ಪರಿಣಾಮದಿಂದ ಪತ್ತೆಯಾಗದ ರೋಗವಿರುತ್ತದೆ .ರೂಪವನ್ನು ಕೆಡಿಸುವುದು ಇವನ ಲಕ್ಷಣ ಗರುಡ ಮಂತ್ರ ಮತ್ತು ನಾಗದೇವರ ಮೂಲ ಮಂತ್ರವನ್ನು 48 ದಿನ 108 ಬಾರಿಯಂತೆ ಹೇಳುತ್ತಾ ಬಂದಾಗ ವೈದ್ಯರಿಗೆ ರೋಗ ಲಕ್ಷಣ ಗೊತ್ತಾಗುತ್ತದೆ.

ಕರ್ಕಾಟಕ

ಜನ್ಮದಲ್ಲಿ ಶುಕ್ರ ಬಂದಿರುವುದು ಮಿಶ್ರ ಫಲವನ್ನು ನೀಡುವನು .ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುತ್ತದೆ ಸ್ರೀ ಸಂಬಂಧ ಕಲಹದಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ .ಕಫ ಮತ್ತು ವಾತ ಸಂಬಂಧಿ ರೋಗಗಳು ಬರಬಹುದು. ನೀಚ ಸ್ರೀ ಸಂಬಂಧ ಬರದಂತೆ ಎಚ್ಚರ ವಹಿಸಬೇಕು. ಉತ್ತಮ ಧನಾಗಮನವಾಗಲಿದೆ. ಯೌವನ  ಅಧಿಕಾರ ಅವಿವೇಕತನ ಶ್ರೀಮಂತಿಕೆ ಒಟ್ಟಿಗೆ ಬಂದಾಗ ಒಬ್ಬ ವ್ಯಕ್ತಿ ಮಧ್ಯ ರಾತ್ರಿಯಲ್ಲಿ ಕೊಡೆ ಬಿಡಿಸಿ ಕುಳಿತುಕೊಳ್ಳುತ್ತಾನಂತೆ  ಅಂದರೆ ಹುಚ್ಚು ಹಿಡಿದವನಂತಾಗುತ್ತಾನೆ .

ಸಿಂಹ

ಗುರುವಿನ ಅಪೂರ್ಣ ಅನುಗ್ರಹವಿದೆ. ಆದುದರಿಂದ ಹೆದರುವ ಅಗತ್ಯವಿಲ್ಲ. ಸೆಪ್ಟೆಂಬರ್ 23 ತಾರೀಕಿನವರೆಗೆ ಕೇತು ಬದಲಾವಣೆಯಾಗುವ ವರೆಗೆ ಈ  ಪರಿಸ್ಥಿತಿ .ಈಗ ನಿಮ್ಮಲ್ಲಿ ಧೈರ್ಯ ಸ್ಥೈರ್ಯ ವಿರುತ್ತದೆ  ಜನ್ಮದಲ್ಲಿ ರವಿ ಬುಧವಿರುವುದರಿಂದ ರಾಜಕೀಯದಲ್ಲಿರುವವರಿಗೆ  ಉತ್ತಮ ಸ್ಥಾನಮಾನ ಲಭಿಸಲಿದೆ .ಉನ್ನತ ಸ್ಥಾನಮಾನ  ಪಡೆಯುವ ಅವಕಾಶ ಇದೆ  ಭಡ್ತಿ ಯೋಗವಿದೆ.

ಕನ್ಯಾ

ನಿಮ್ಮ ಯಾವುದೇ ವ್ಯವಹಾರ ಕ್ಷೇತ್ರದಲ್ಲಿ ಮಿಶ್ರ ಫಲ ಲಭಿಸಲಿದೆ .ಸೆಪ್ಟೆಂಬರ್ 23 ತಾರೀಕಿನವರೆಗೆ ಎಚ್ಚರವಿರಬೇಕು ಶನಿ ಪಂಚಮದಲ್ಲಿ ಇರುವುದರಿಂದ ನೀವಾಡುವ ಒಂದೊಂದು ಮಾತು ಬಹಳ ನಿಷ್ಟುರವಾಗಿರುತ್ತದೆ. ಮಕ್ಕಳಿಂದಲೂ ಬೇಸರವೆನಿಸಲಿದೆ. ಸಾಲ ಮಾಡುವ ಮನಸ್ಸು ಇದ್ದರೂ ಈಗ ಬೇಡ .ಯಾರಿಗೂ ಜಾಮೀನು ಸಹಿ ಹಾಕಬೇಡಿ.

ತುಲಾ

ಸುಖ ಸ್ಥಾನದಲ್ಲಿ ಶನಿ ಇರುವುದರಿಂದ ” ದುಖೀ ಶ್ಯಾದ್ಗ್ರ್ಹಾಯಾನಮಾತೃವಿಯುತೊ ಬಾಲ್ಯೆ ಸರುಗಬ್ನ್ಧುಭೆ ” ಅಂದರೆ ಬಾಲ್ಯದಲ್ಲಿ ದುಃಖಿಯೂ ತಾಯಿ ವಾಹನ ಮನೆಗಳಿಂದ ರಹಿತನೂ ರೋಗಿಯೂ ಆಗುವನು  “ವಿಸುಖ:  ಪೀಡಿತಮಾನಸ: ” ಸುಖ ಹಾಗೂ ಮನ:ಶಾಂತಿ  ರಹಿತನೂ ಆಗುವನು.ಕುಜನಿಂದಾಗಿ ಪತಿ ಪತ್ನಿಯರ ಜೊತೆಗೆ ವಿರಸ ಬರದಂತೆ ಎಚ್ಚರ ವಹಿಸಬೇಕು ,ಒಟ್ಟಾರೆಯಾಗಿ ಪ್ರತಿಯೊಂದು ವ್ಯವಹಾರದಲ್ಲಿಯೂ ಎಚ್ಚರವಿರಬೇಕು .

ವೃಶ್ಚಿಕ

ಬಹಳ ಜವಾಬ್ದಾರಿಯಿಂದ ದುಡಿಯುತ್ತಾ ಬಂದ ನಿಮಗೆ ಈಗ ಜನರು ಗುರುತಿಸುವ ಕಾಲ ಬಂದಿದೆ. ನೀವು ಮಾಡುವ ಯಾವುದೇ ಕೆಲಸಗಳು ಮುಂದಿನ ಜೀವನಕ್ಕೆ ಬುನಾದಿಯಾಗಿರುತ್ತದೆ.ಆದರೆ ಒಂದು ಮಾತು ನೆನಪಿರಲಿ ನೀವು ಖರ್ಚು ಮಾಡುವ ಪ್ರತಿಯೊಂದು ಪೈಸೆಗೂ ಲೆಕ್ಕವಿರಲಿ. ಅಷ್ಟಮದ ರಾಹು ಸೆಪ್ಟೆಂಬರ್ 23 ತಾರೀಕಿನವರೆಗೆ ಮಾನಸಿಕ ಕಿರಿಕಿರಿಯಿಂದ ಅನಾರೋಗ್ಯದಿಂದ ಹೊರಬರಲು ಬಿಡುವುದಿಲ್ಲ .ನಾಗ ದೇವರ ಮೂಲಮಂತ್ರ 108 ಬಾರಿ ಜಪಿಸುತ್ತಾ ಬರಬೇಕು .

ಧನು

ಗುರು ಕೇತು ನಿಮ್ಮ ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ .ಎಲ್ಲ ರೀತಿಯ ಸೌಕರ್ಯ ಇದ್ದಾಗಲೂ ಏನೋ ಮನಸ್ಸಿನಲ್ಲಿ ಭಯದ ವಾತಾವರಣ ಇರುತ್ತದೆ .ಬೆಚ್ಚಿಬೀಳಿಸುವ ಸಂದರ್ಭಗಳು ,ಹಗ್ಗ ಹಾವಾಗಿ ಕಚ್ಚಲು ಸಾದ್ಯವೇ ಎಂಬ ಮಾತಿದೆ. ವಾತ ಪೀಡೆಯನ್ನು ವ್ಯರ್ಥ ಖರ್ಚುಗಳನ್ನು ಶನಿ ತರಲಿದ್ದಾನೆ, ನೀವಾಡುವ ಪ್ರತಿಯೊಂದು ಮಾತಿಗೂ ತೂಕವಿರಬೇಕು ,ಎಲ್ಲರೂ ಹೌದು ಹೌದು ಎನ್ನಬೇಕು.

ಮಕರ

ಜನ್ಮದಲ್ಲಿ ಶನಿ ಇದ್ದಾನೆ .ವ್ಯಯದಲ್ಲಿ ಗುರು ಕೇತು ಇದ್ದಾರೆ .ಸುಖ ಸ್ಥಾನದಲ್ಲಿ ಕುಜ ಇದ್ದಾನೆ .ಶುಕ್ರ ಸಪ್ತಮದಲ್ಲಿ ಅಷ್ಟಮದಲ್ಲಿ  ರವಿ  ಮತ್ತು ಬುಧ   ಯಾವ ಗ್ರಹರೂ ಸಹಾಯ ಮಾಡುವ  ಸ್ಟಿತಿಯಲ್ಲಿ ಇಲ್ಲ .ಕುಲದೇವರ ದರ್ಶನ ಮಾಡಲೇಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು . ತುಂಬಾ ಜನ ಸೇರುವಲ್ಲಿ ಹೋಗಲೇ ಬೇಡಿ .ಮನೆಯಿಂದ ಅಗತ್ಯ ಇದ್ದರೆ ಮಾತ್ರ ಬನ್ನಿರಿ .ಯಾಕೆಂದರೆ ನಿಮ್ಮ ಗ್ರಹ ಸ್ಥಿತಿ ಹಾಗಿದೆ. ಉಸಿರಾಟದ ಸಮಸ್ಯೆ ರವಿ ತರುವ ಸಾಧ್ಯತೆ ಇದೆ ಎಚ್ಚರವಿರಲಿ.

ಕುಂಭ

ನಿಮ್ಮ ಜೀವನದಲ್ಲಿಯೇ ಒಳ್ಳೆಯ ಕಾಲ ಇದು. ಗುರು ಕೇತು ಲಾಭ ಕ್ಷೇತ್ರದಲ್ಲಿ ನವೆಂಬರ್ 20 ರ ವರೆಗೆ ಇರುವುದು .ಶನಿ ವ್ಯಯದಲ್ಲಿ ಈಗ ಇದ್ದಾನೆ .ಸಾಡೇ ಸಾತ್ ಶನಿಯ ಕಾಟವಿದ್ದರೂ ಅಷ್ಟೊಂದು ತೊಂದರೆ ಗೊತ್ತಾಗಲಿಕ್ಕಿಲ್ಲ. ಕೊರೊನಾದ ತೊಂದರೆ ಇಡೀ ಜಗತ್ತಿಗೆ ಇದೆ .ನೆರೆಹೊರೆಯವರೊಡನೆ ಮನಸ್ತಾಪ ಬರದಂತೆ ಎಚ್ಚರ ವಿರಲಿ .ನಿಮ್ಮ ಮನಸ್ಸಿನಲ್ಲಿರುವ” ಅಹಂ ” ಇನ್ನು ಕಡಿಮೆಯಾಗಲೇ ಬೇಕು. ದ್ವಿತೀಯಾಧಿಪತಿ ಗುರು ಶನಿಯೊಂದಿಗೆ ವ್ಯಯಕ್ಕೆ ಬಂದಾಗ ಬಹಳಷ್ಟು ವ್ಯರ್ಥ ಖರ್ಚುಗಳು ಬರಲಿವೆ. ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿ.

ಮೀನ

ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಉತ್ತಮ ಧನಾಗಮನವಿದ್ದರೂ ಮೇಲಧಿಕಾರಿಗಳ ಕಿರಿಕಿರಿ ಇದ್ದೇ ಇರುತ್ತದೆ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಆಳುಗಳೂ ಮಾತಾಡಿಕೊಳ್ಳುವ ಸಂದರ್ಭವಿದೆ .ತಂದೆ ಮಕ್ಕಳ ಜೊತೆಗೆ ಸಣ್ಣ ಪುಟ್ಟ ಮನಸ್ತಾಪಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡಲಿದೆ. ನಿಮ್ಮ ವ್ಯವಹಾರವೆಲ್ಲವೂ ಮೋಸ ವಂಚನೆ ರಹಿತವಾಗಿರಲಿ. 

ಜ್ಯೋಯಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/ 80739 73603









































































































error: Content is protected !!
Scroll to Top