ಮತ್ತೆ ದೋಣಿ ದುರಂತ

ಉಡುಪಿ, ಆ. 26: ಕುಂದಾಪುರ  ಕಡಲ ತೀರದಲ್ಲಿ ಇನ್ನೊಂದು ದೋಣಿ ದುರಂತ ಸಂಭವಿಸಿದೆ. ಆದಿ ಆಂಜನೇಯ ಎಂಬ ಹೆಸರಿನ ದೋಣಿ ಮಗುಚಿದ ಪರಿಣಾಮ ದೋಣಿಯ ಮಾಲಕ ಶ್ರೀನಿವಾಸ್ ಖಾರ್ವಿ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು,  ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.

ನಾಡ ದೋಣಿಯ ಎರಡು  ಇಂಜಿನ್  ಸಮುದ್ರ ಪಾಲಾಗಿದೆ.  ನಾಲ್ಕು ಮಂದಿ  ಮೀನುಗಾರರು ಮರವಂತೆ ಸಮೀಪ  ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ ತೆರೆಯ ರಭಸಕ್ಕೆ ದಿಬ್ಬಕ್ಕೆ ಢಿಕ್ಕಿ ಹೊಡೆದು ದೋಣಿ ಮಗುಚಿದೆ.ಮೀನುಗಾರರು ಸಮುದ್ರದಲ್ಲಿ ಈಜಿ ಪಾರಾಗಿದ್ದಾರೆ. ದೋಣಿ ಕಾಲು ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಖಾರ್ವಿ ಅವರಿಗೆ ಏಟಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಣಿ ದೋಣಿ ದುರಂತ ಕಾಣಿಸಿಕೊಳ್ಳುತ್ತಿರುವುದು ಆತಂಕ ಹುಟ್ಟಿಸುತ್ತಿದೆ.

















































































error: Content is protected !!
Scroll to Top