ನೀಟ್‌, ಜೆಇಇ ಪರೀಕ್ಷೆ ಕೇಂದ್ರಗಳ ಹೆಚ್ಚಳ

ದಿಲ್ಲಿ, ಆ. 26 :ನೀಟ್‌ ಮತ್ತು ಜೆಇಇ ಪರೀಕ್ಷೆ ನಡೆಸುವುದಕ್ಕೆ ಎದುರಾಗಿದ್ದ ತೀರ್ವ ವಿರೋಧವನ್ನು ಪರಿಗಣಿಸಿಸ ಸರ್ಕಾರ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ.

 ಮುಂಬರುವ ಸೆಪ್ಟೆಂಬರ್ ನಲ್ಲಿ ನೀಟ್ ಮತ್ತು  ಜೆಇಇ ಪರೀಕ್ಷೆ ನಡೆಯಲಿದೆ.  ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಲು ಹಲವು  ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. 570 ಇದ್ದ ಜೆಇಇ ಪರೀಕ್ಷಾ ಕೇಂದ್ರಗಳನ್ನು 660 ಗೆ ಏರಿಸಲಾಗಿದೆ ಮತ್ತು ನೀಟ್ ಪರೀಕ್ಷಾ ಕೇಂದ್ರಗಳನ್ನು 2,546 ರಿಂದ 3,843 ಗೆ ಹೆಚ್ಚಿಸಲಾಗಿದೆ.

ಜೆಇಇ ಗೆ 8,50,000 ವಿದ್ಯಾರ್ಥಿಗಳು ನೊಂದಣಿಯಾಗಿದ್ದಾರೆ ಮತ್ತು ನೀಟ್ ಪರೀಕ್ಷೆಯನ್ನು ಬರೆಯಲು ಸುಮಾರು 16 ಲಕ್ಷ ಮಂದಿ ಹೆಸರನ್ನು ನೊಂದಾಯಿಸಿದ್ದಾರೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಕೊಠಡಿಯಲ್ಲಿ 24 ರಷ್ಟಿದ್ದ ಅಭ್ಯರ್ಥಿಗಳ  ಸಂಖ್ಯೆಯನ್ನು 12ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 1 ರಿಂದ 6 ವರೆಗೆ ಜೆಇಇ ಪರೀಕ್ಷೆ ನಡೆಯಲಿದ್ದು ನೀಟ್ ಪರೀಕ್ಷೆ ಸೆಪ್ಟೆಂಬರ್ 13ಕ್ಕೆ ನಿಗದಿಯಾಗಿದೆ.

















































































error: Content is protected !!
Scroll to Top