ಆಕ್ಷೇಪಾರ್ಹ ಪಾಠ ಬೋಧಿಸದಂತೆ ಸೂಚನೆ ನೀಡುತ್ತೇವೆ – ಅದಮಾರು ಮಠದ ಸ್ವಾಮೀಜಿ ಮನವಿಗೆ ಶಿಕ್ಷಣ ಸಚಿವರ ತುರ್ತು ಸ್ಪಂದನೆ

ಬೆಂಗಳೂರು,ಆ. 26:ಆರನೇ ತರಗತಿಯ ಸಮಾಜಶಾಸ್ತ್ರ ಪಠ್ಯ ಪುಸ್ತಕದಲ್ಲಿರುವ ಹಿಂದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಧ್ಯಾಯವೊಂದನ್ನು ಕೈಬಿಡಬೇಕೆಂಬ ಉಡುಪಿ ಪರ್ಯಾಯ ಶ್ರೀ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ಮನವಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ್‌ ಕುಮಾರ್‌ ಅವರು ತುರ್ತಾಗಿ ಸ್ಪಂದಿಸಿದ್ದಾರೆ.    

ಸ್ವಾಮೀಜಿ ಕಳುಹಿಸಿದ ಧ್ವನಿ ಸಂದೇಶವನ್ನು ಆಲಿಸಿದ ಸಚಿವರು ಈ ವರ್ಷ ಈ ಅಧ್ಯಾಯವನ್ನು ಬೋಧಿಸಬಾರದೆಂದು ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ.

ಈ ಪಾಠ ಮೊದಲೇ ಪಠ್ಯ ಪುಸ್ತಕದಲ್ಲಿ ಇತ್ತು. ಈ ವರ್ಷದ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ತಲುಪಿಸಿ ಆಗಿರುವುದರಿಂದ ಈ ಪಾಠವನ್ನು ಕೈಬಿಡುವುದು ಅಸಾಧ್ಯ. ಆದರೆ ಈ ವರ್ಷ ಈ ಪಾಠವನ್ನು ಬೋಧಿಸದಂತೆ ಆದೇಶ ಹೊರಡಿಸುವುದಾಗಿ ಸ್ವಾಮೀಜಿಯವರಿಗೆ ಕಳುಹಿಸಿದ ಧ್ವನಿ ಸಂದೇಶದಲ್ಲಿ ಸಚಿವರು ಭರವಸೆ ನೀಡಿದ್ದಾರೆ.

ಈ ವಿವಾದಾತ್ಮಕ ಪಾಠದಲ್ಲಿ ಯಾಗ, ಯಜ್ಞಾದಿಗಳ ಬಗ್ಗೆ ಆಕ್ಷೇಪಾರ್ಹ ಅಂಶಗಳಿದ್ದವು. ಅಲ್ಲದೆ ವರ್ಣ ಮತ್ತು ಜಾತಿ  ವ್ಯವಸ್ಥೆ , ಸಾಮಾಜಿಕ ಕಟ್ಟುಪಾಡುಗಳು ಇತ್ಯಾದಿಗಳ ಬಗ್ಗೆ ಆಕ್ಞೇಪಾರ್ಹ ಉಲ್ಲೇಖಗಳಿದ್ದವು. ಇದು ಗಮನಕ್ಕೆ ಬಂದಾಗ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರೂ ಆಗಿರುವ ಸ್ವಾಮೀಜಿಗಳು ಸಚಿವರ ಗಮನ ಸೆಳೆದಿದ್ದಾರೆ.ಕಳೆದ ಕೆಲವಾರು ದಿನಗಳೀಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪಾಠದ ಬಗ್ಗೆ ಚರ್ಚೆ ನಡೆಯುತ್ತಿತ್ತು.

















































































error: Content is protected !!
Scroll to Top