ಮುಂಬಯಿ, ಆ. 26: ಮುಂಬಯಿ ಮಹಾನಗರಿಯ ಜೀವನಾಡಿ ಎಂದೇ ಅರಿಯಲ್ಪಡುವ ಲೋಕಲ್ ರೈಲುಗಳು ಸೆ.1ರಿಂದ ಪೂರ್ಣ ಪ್ರಮಾಣದಲ್ಲಿ ಶುರುವಾಗುವ ಸಾಧ್ಯತೆಗಳಿವೆ.
ಕಳೆದ ಮಾರ್ಚ್ ನಲ್ಲಿ ಕೊರೊನಾ ಹರಡಲು ತೊಡಗಿದಾಗ ಲೋಕಲ್ ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. 46 ವರ್ಷಗಳ ಬಳಿಕ ಇಷ್ಟು ಸುದೀರ್ಘ ಅವಧಿಗೆ ಲೋಕಲ್ ರೈಲುಗಳು ರದ್ದು ಆಗಿರುವುದು ಇದೇ ಮೊದಲು.ರೈಲುಗಳು ಇಲ್ಲದ ಕಾರಣ ಮುಂಬಯಿಯ ಜನಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.
ಜೂನ್ 14ರಿಂದ ಕೆಲವು ಲೋಕಲ್ ರೈಲುಗಳನ್ನು ಶುರು ಮಾಡಲಾಗಿದೆಯಾದರೂ ತುರ್ತು ಸೇವೆಗೆ ಹೋಗುವವರಿಗೆ ಮಾತ್ರ ಪ್ರಯಾಣಿಸಲು ಅನುಮತಿಯಿತ್ತು. ಸುಮಾರು 1.25 ಲಕ್ಷ ಮಂದಿಗೆ ಮಾತ್ರ ಸರ್ಕಾರ ವಿಶೇಷ ಪಾಸುಗಳನ್ನು ನೀಡಿತ್ತು. ಸಾಮಾನ್ಯ ದಿನಗಳಲ್ಲಿ ಮುಂಬಯಿ ಲೋಕಲ್ ರೈಲುಗಳಲ್ಲಿ ಸರಾಸರಿಯಾಗಿ 70 ಲಕ್ಷ ಮಂದಿ ನಿತ್ಯ ಪ್ರಯಾಣಿಸುತ್ತಾರೆ.

ಲೋಕಲ್ ಮತ್ತು ಮೆಟ್ರೊ ರೈಲುಗಳ ಸಂಚಾರ ಮತ್ತೆ ಆರಂಭಿಸಲು ಕೆಂದ್ರ ಆ.31ರಂದು ಮಾರ್ಗಸೂಚಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.








































