ಪತ್ರಕ್ಕೆ ವೀರಪ್ಪ ಮೊಯ್ಲಿ ವಿಷಾದ

ಬೆಂಗಳೂರು, ಆ.26: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಭಾವನೆಗೆ ನಮ್ಮಿಂದ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇವೆ ಎಂದು ಪಕ್ಷದ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

23  ಹಿರಿಯ ನಾಯಕರು ಬರೆದಿರುವ ಪತ್ರದಿಂದ ಸೋನಿಯಾ ವಿಚಲಿತರಾಗಿದ್ದಾರೆಂಬ ವರದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೊಯ್ಲಿ ಈ ಹೇಳಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪವಾಗಬೇಕು ಮತ್ತು ಇದಕ್ಕಾಗಿ ಪೂರ್ಣಾವಧಿಯ ಸಕ್ರಿಯ ನಾಯಕರೊಬ್ಬರು ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕೆಂದು ಆಗ್ರಹಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.

 ಈ ಪತ್ರದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಕಾಂಗ್ರೆಸ್‌ ಕಾರ್ಯಕಾರಿಣಿಯ ತುರ್ತು ಬೈಠಕ್‌  ಕರೆಯಲಾಗಿತ್ತು. ಈ ಬೈಠಕ್‌ ನಲ್ಲಿ ಪತ್ರ ಬಹಿರಂಗವಾದುದರ ಕುರಿತು ಸೋನಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿಯವರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಪತ್ರವನ್ನು ಕರ್ನಾಟಕದ ಓರ್ವ ಹಿರಿಯ ನಾಯಕರೇ ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ.

















































































error: Content is protected !!
Scroll to Top