ಕೊಡೇರಿ ದೋಣಿ ದುರಂತ : ನಾಲ್ಕು ಮೃತದೇಹ ಪತ್ತೆ

ಕುಂದಾಪುರ, ಆ.,18:   ಕೊಡೇರಿ ಸಮೀಪ ಭಾನುವಾರ ಮೀನುಗಾರಿಕೆ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ  ಮಗುಚಿ ಬಿದ್ದ ದುರ್ಘಟನೆಯಲ್ಲಿ  ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳು ಪತ್ತೆಯಾಗಿದೆ. ನಿನ್ನೆ ರಾತ್ರಿ ಶೇಖರ ಖಾರ್ವಿ(39) , ಲಕ್ಷ್ಮಣ ಖಾರ್ವಿ(34) ಹಾಗೂ ಮಂಜುನಾಥ ಖಾರ್ವಿ (40) ಅವರ ಮೃತದೇಹಗಳು ಪತ್ತೆಯಾದರೆ ನಾಗ ಖಾರ್ವಿ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಯಿತು.

ಶೇಖರ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರ ಹೊಸಹಕ್ಲು ಬಳಿ, ಲಕ್ಷಣ ಖಾರ್ವಿ ಅವರ ಮೃತದೇಹ ಆದ್ರಗೋಳಿ ಹಾಗೂ ಮಂಜುನಾಥ ಖಾರ್ವಿ ಅವರ ಮೃತದೇಹ ಗಂಗಿಬೈಲು ಬಳಿ ದೊರೆತಿದೆ. ಇಂದು ಬೆಳಿಗ್ಗೆ ನಾಗ ಖಾರ್ವಿ ಮೃತದೇಹ ಹೊಸಹಕ್ಲುವಿನಲ್ಲಿ ಪತ್ತೆಯಾಯಿತು.
ಕೊಡೇರಿಯಲ್ಲಿ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ಅವಘಡದಲ್ಲಿ ನಾಲ್ವರು ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಎಂಟು ಮಂದಿ ಅಪಾಯದಿಂದ ಪಾರಾಗಿದ್ದರು. ನಾಪತ್ತೆಯಾದವರಿಗಾಗಿ  ಶೋಧ ಕಾರ್ಯ ಮುಂದುವರಿದಿತ್ತು. ಇಂದು ರಾತ್ರಿಯ ಹೊತ್ತಿಗೆ ಎಲ್ಲಾ ಮೃತದೇಹಗಳು ಪತ್ತೆಯಾಗಿವೆ.

















































error: Content is protected !!
Scroll to Top