
ಹೆಬ್ರಿ : ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಶಿವಪುರ ಗ್ರಾಮದ ಮಂಜುನಾಥ ದೇವಾಡಿಗ ಆ. 15ರಂದು ಮೃತಪಟ್ಟಿರುತ್ತಾರೆ. ಎರ್ಲಪಾಡಿ ಗೋವಿಂದೂರು ನೀರಿನ ಟ್ಯಾಂಕ್ ಬಳಿ ಆ. 8ರಂದು ಕೆಲಸ ಮಾಡುತ್ತಿದ್ದ ಸಂದರ್ಭ ಗಾಯಗೊಂಡಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆ. 15ರಂದು ಮೃತಪಟ್ಟಿರುತ್ತಾರೆ.