ಲಕ್ನೋ : ಬಾಲಕಿ ಮೇಲೆ ಭೀಕರ ಅತ್ಯಾಚಾರ : ಕಣ್ಣಗುಡ್ಡೆ ಕಿತ್ತು, ನಾಲಗೆ ಕತ್ತರಿಸಿ ಕೊಲೆ

ಲಕ್ನೊ, ಆ. 16: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನೇಪಾಳದ ಗಡಿಗೆ ಒತ್ತಿಕೊಂಡಿರುವ ಹಳ್ಳಿಯಲ್ಲಿ ದುಷ್ಕರ್ಮಿಗಳು 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಣ್ಣ ಗುಡ್ಡೆಗಳನ್ನು ಕಿತ್ತು ಹಾಕಿ , ನಾಲಗೆ ಕತ್ತರಿಸಿ, ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಬಾಲಕಿಯ ಶವ ಮನೆ ಸಮೀಪದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು, ಘಟನೆಗೆ  ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶುಕ್ರವಾರ ಬಾಲಕಿ ನಾಪತ್ತೆಯಾಗಿದ್ದಳು. ಅಂದೇ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಬಾಲಕಿ ದಲಿತ ಸಮುದಾಯಕ್ಕೆ  ಸೇರಿದವಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಘೋರ ಹತ್ಯೆ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

 

 

 

 

 





































































































































error: Content is protected !!
Scroll to Top