ನಿತ್ಯ ಭವಿಷ್ಯ 16-08-2020

0

ಮೇಷ

ಉತ್ತಮ ದೈವಾನುಗ್ರಹವಿರುವುದರಿಂದ ನೀವು ಎಣಿಸಿರುವ ಕೆಲಸವೆಲ್ಲವೂ ಸರಾಗವಾಗಿ ನೆರವೇರಲಿವೆ. ಜನ್ಮದಲ್ಲಿರುವ ಕುಜ ನಿಮ್ಮಲ್ಲಿ ಕ್ರೂರತ್ವ ವನ್ನು, ಸಿಟ್ಟನ್ನು ತರಲಿದ್ದಾನೆ. ಆದುದರಿಂದ ಮನಸ್ಸು ಹತೋಟಿಯಲ್ಲಿರಲಿ. ನಿರುದ್ಯೋಗಿಗಳಲ್ಲಿ ಆಶಾಕಿರಣ ಮೂಡಲಿದೆ. ಜೀವನದಲ್ಲಿ ಉತ್ತಮ ನೆಲೆಯೊಂದು ಕಾಣಲಿದೆ.

ವೃಷಭ

ಅಷ್ಟಮದ ಗುರು ಕೇತು ನಿಮ್ಮ ಐಷಾರಾಮ ಜೀವನದ ಕನಸಿಗೆ ಎಳ್ಳು ನೀರು ಬಿಡುವ ಸಾಧ್ಯತೆಯಿದೆ. ಇದನ್ನೇ ಗ್ರಹಗತಿ ಎನ್ನುವುದು. ವಿದ್ಯಾರ್ಥಿಗಳು ಬಹಳ ಎಚ್ಚರದಿಂದ ಇರಬೇಕಾಗಿರುವುದು ಅವಶ್ಯ. ದುಂದುವೆಚ್ಚ ಬೇಡ. ಉದ್ಯೋಗಿಗಳು ಕೆಲಸದ ಹಾಗೆಯೇ ಹಣದ ಮಹತ್ವ ವನ್ನು ತಿಳಿದುಕೊಂಡು ಮುನ್ನೆಡೆಯುವುದು ಅತಿ ಅವಶ್ಯ ವಿದೆ .

ಮಿಥುನ

ಸಪ್ತಮದ ಗುರು ಕೇತು ನಿಮಗೆ ಉತ್ತಮ ದೈವಾನುಗ್ರಹ ನೀಡುತ್ತಿರುವುದರಿಂದ ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಏರಲಿದ್ದೀರಿ  .ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ಆದರೆ, ಶನಿ ಅಷ್ಟಮದಲ್ಲಿ ಇರುವುದರಿಂದ ಶಾರೀರಿಕವಾಗಿ, ಮಾನಸಿಕವಾಗಿ ನೀವು ಹಿಂಸೆ ಅನುಭವಿಸುವ ಯೋಗ ವಿದೆ. ವಾಹನ ಚಾಲಕರು ಎಚ್ಚರವಿರಬೇಕು.

ಕರ್ಕಾಟಕ

ಅಮಾವಾಸ್ಯೆ ಹುಣ್ಣಿಮೆಯಂತೆ ಜೀವನದಲ್ಲಿ ಏರಿಳಿತಗಳು ಬರುತ್ತಲೇ ಇರುತ್ತವೆ. ಒಮ್ಮಿಂದೊಮ್ಮೆಲೆ ಜವಾಬ್ದಾರಿಗಳು ನಿಮ್ಮ ಮೇಲೆ ಬರಲಿವೆ. ಸ್ವಾಭಾವಿಕವಾಗಿಯೇ ನಿಮ್ಮ ಮನಸ್ಸು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಡೆಗೆ ವಾಲುತ್ತದೆ. ಅನೇಕ ಮೂಲಗಳಿಂದ ಧನಾಗಮನವಾಗಲಿದೆ. ಗರ್ಭಿಣಿಯರು ಬಹಳ ಜಾಗ್ರತೆ ವಹಿಸಬೇಕು.

ಸಿಂಹ

ಬರಲಿರುವ ಅನೇಕ ಸಮಸ್ಯೆಗಳು ನಿಮಗೆ ಅರಿವಿಲ್ಲದಯೆ ಕಳೆದು ಹೋಗಲಿವೆ. ಕಾರಣವೆಂದರೆ ಪಂಚಮದಲ್ಲಿರುವ ಗುರು ಕೇತು. ನಿರುದ್ಯೋಗಿಗಳು ಬಂದ ಯಾವುದೇ ಉದ್ಯೋಗವನ್ನು ಸ್ವೀಕರಿಸುವ ದೊಡ್ಡ ಮನಸ್ಸು ಮಾಡಲೇಬೇಕು . ನಂತರದಲ್ಲಿ ನಿಮಗೆ ಬೇಕಾದ ಉದ್ಯೋಗ ಸಿಗಲಿದೆ. ಪ್ರೇಮಿಗಳು ಎಚ್ಚರದಿಂದಿರಬೇಕು.

ಕನ್ಯಾ

ಬದಲಾವಣೆ ಜೀವನದ ನಿಯಮ. ಏನೇ ಬಂದರೂ ನಾವು ಸ್ವೀಕರಿಸಬೇಕು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಹಿರಿಯರೊಂದಿಗೆ ಪ್ರೀತಿಯಿಂದ ಕಾಣಿ. ಜವಾಬ್ದಾರಿ ಹುದ್ದೆ ನಿಮ್ಮದಾಗಿರುತ್ತದೆ.

ತುಲಾ

ಶನಿ ಸುಖ ಸ್ಥಾನದಲ್ಲಿ ಇರುವುದರಿಂದ ಆರ್ಥಿಕ ಸಂಪನ್ಮೂಲಗಳನ್ನು ಒಟ್ಟು ಮಾಡಲು ಬಹಳ ಶ್ರಮ ಪಡಬೇಕಾಗುತ್ತದೆ. ಸಮತೋಲನದ ಜೀವನ ನಡೆಸಲು ಅಧ್ಯಾತ್ಮದ ಸಹಾಯ ಬೇಕಾದೀತು.  ಶಿವ ನಾಮ ಸ್ಮರಣೆ ಸಹಾಯವಾದೀತು. ವಿದ್ಯಾರ್ಥಿಗಳು ಹಿರಿಯರ ಹಿತ ವಚನವನ್ನು ಕೇಳಲು ತಯಾರಾಗಿರುವುದಿಲ್ಲ.

ವೃಶ್ಚಿಕ

ದ್ವಿತೀಯದ ಗುರು ಕೇತು ಉತ್ತಮ ದೈವಾನುಗ್ರಹ ಹೊಸ ಚಿಂತನೆ ಹೊಸ ಕಾರ್ಯಗಳ ಆರಂಭಗಳಿಗೆ ಅನುಕೂಲವಾದೀತು .ತೃತೀಯದ ಶನಿ ನಿಮಗೆ ಅನೇಕ ಮೂಲಗಳಿಂದ  ಹಣವನ್ನು ತಂದರೂ ನಿಮ್ಮ ದುಡುಕು ನಿರ್ಧಾರಗಳು ಆರ್ಥಿಕ ಸ್ಥಿತಿಯನ್ನು ಬುಡಮೆಲು ಮಾಡಲಿವೆ. ಸತ್ಯವನ್ನು ನೇರ ನುಡಿಯಿಂದ ಹೇಳುವ ನಿಮ್ಮ ಅಬ್ಯಾಸದಿಂದ ಎಲ್ಲರ ನಿಷ್ಠುರಕ್ಕೆ ಕಾರಣರಾಗುತ್ತೀರಿ.

ಧನು

ಸಾಡೇಸಾತ್ ಶನಿಯ ಪ್ರಭಾವ ರಾಜ ವಿಕ್ರಮಾದಿತ್ಯನನ್ನೇ  ಬಿಡಲಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ನಾನಾ ರೀತಿಯಲ್ಲಿ ತೋರ್ಪಡಿಕೆಗೆ ವ್ಯರ್ಥ ಖರ್ಚು ಮಾಡಲಿದ್ದೀರಿ. ಎಲ್ಲರಲ್ಲಿಯೂ ನಿಷ್ಠುರ ಮಾಡಿಕೊಂಡು ಬರಲಿದ್ದೀರಿ.   ಮತ್ತೆ ಬೇಸರವನ್ನು ಮಾಡುತ್ತಾ ಇರುತ್ತೀರಿ . ಯಾರ ಮಾತನ್ನೂ ಕೇಳುವ ತಾಳ್ಮೆ ನಿಮ್ಮಲ್ಲಿ ಇಲ್ಲ .ಕಾಲಾಯ ತಸ್ಮೈ ನಮ:

ಮಕರ

ಜನ್ಮದ ಶನಿ ಅಥವಾ ಸಾಡೇಸಾತ್ ಶನಿ  ಇಂದು ನಿಮ್ಮೊಂದಿಗಿದ್ದಾನೆ. ಯಾವುದೇ ವ್ಯವಹಾರದಲ್ಲಿ ಯೋಚಿಸಿ ನಿರ್ಧಾರ ಮಾಡಬೇಕು.ಎತ್ತ ನೋಡಿದರೂ ಹಿತಶತ್ರುಗಳು ಆವರಿಸಿರುತ್ತಾರೆ. ಸಾಲ ಮಾಡಬೇಡಿ, .ಯಾರಿಗೂ ಸಾಲ ಕೊಡಬೇಡಿ .ಯಾರಿಗೂ ಸಾಲಕ್ಕೆ ಜಾಮೀನು ಸಹಿ ಹಾಕಬೇಡಿ .ಸಾಂಸಾರಿಕವಾಗಿ ನೆಮ್ಮದಿ ಕಂಡು ಬಂದರೂ ಅದು ತಾತ್ಕಾಲಿಕವಾಗಿರುತ್ತದೆ.

ಕುಂಭ

ಬಹಳ ಅದೃಷ್ಟ ದ ದಿನಗಳನ್ನು ನೋಡುತ್ತಿದ್ದೀರಿ . ಗುರು ಕೇತು ಏಕಾದಶದಲ್ಲಿ ಇದ್ದಾರೆ . ನಿಮ್ಮ ಕನಸುಗಳು ನನಸಾಗುವ ಕ್ಷಣಗಳು .ಆದರೆ ಶನಿ ವ್ಯಯದಲ್ಲಿ ಇದ್ದಾನೆ .ಅವನನ್ನು ಸಾಡೇಸಾತ್ ಶನಿ ಎಂದು ಕರೆಯುತ್ತಾರೆ. ನಿಮ್ಮ ಮರ್ಕಟ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು .ನಿಮ್ಮ ಸಾರ್ವಜನಿಕ ಸೇವೆಯಲ್ಲಿ ಹಿಡಿತ ಇರಲಿ.

ಮೀನ

ನಾವು ಎಷ್ಟೋ ತಪ್ಪುಗಳನ್ನು ಮಾಡುತ್ತಲೇ ಮುಂದೆ ಸಾಗುತ್ತೇವೆ .ಆದರೆ ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಾ ಸಾಗಿದರೆ ಏನು ಅರ್ಥ?  ನಿಮ್ಮ ಸಂಕುಚಿತ ಮನಸ್ಸೇ ನಿಮ್ಮನ್ನು ಹಾಳು ಮಾಡಲಿದೆ .ನೌಕರರಿಗೆ ವರ್ಗಾವಣೆ ಭಡ್ತಿ ಯೋಗವಿದೆ.ವಿದ್ಯಾರ್ಥಿಗಳು ಯಶಸ್ವಿಯಾಗುವರು.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ, ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ ಕಾರ್ಕಳ,

ಸಂಪರ್ಕ ಮಾಹಿತಿ: 97414 89529/80739 73603---
Previous articleಶಾಸಕ ಲಾಲಾಜಿ ಮೆಂಡನ್‌ ಅವರಿಗೆ ಕೊರೊನಾ ಪೊಸಿಟಿವ್‌
Next articleಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಪೋಸ್ಟ್‌ : ಪೊಲೀಸರ ಎಚ್ಚರಿಕೆ

LEAVE A REPLY

Please enter your comment!
Please enter your name here