ಆಹಾರ ಸುರಕ್ಷತೆ – ಪಿಜಿಗಳಲ್ಲಿ ತಪಾಸಣೆಗೆ ಸಚಿವ ಯು.ಟಿ ಖಾದರ್‌ ಸೂಚನೆ

ಬೆಂಗಳೂರು: ಹೋಟೆಲ್‌ ಮತ್ತು ಆಹಾರ ತಯಾರಿಕಾ ಘಟಕಗಳ ನಂತರ ಈಗ ಪಿಜಿಗಳ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವ ಯು.ಟಿ ಖಾದರ್‌ ಆಹಾರ ಮತ್ತು ಔಷಧಿ ಆಡಳಿತ (FDA) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಆಹಾರ ಸುರಕ್ಷತಾ ಇಲಾಖೆ ಕೆಲವು ದಿನಗಳಿಂದ ಹೋಟಲ್‌, ರೆಸ್ಟೋರೆಂಟ್‌ ಮತ್ತು ಆಹಾರ ತಯಾರಿಕಾ ಘಟಕಗಳು ಸೇರಿದಂತೆ ಅನೇಕ ಕಡೆಗಳಲ್ಲಿ ತಪಾಸಣೆ ನಡೆಸಿ ನಿಯಮಗಳನ್ನು ಪಾಲಿಸದೇ ಇರುವವರಿಗೆ ಭಾರೀ ದಂಡ ವಿಧಿಸಿದೆ.

ಈಗ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಪಿಜಿಗಳಲ್ಲಿಯೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಪರಿಶೀಲನೆ ನಡೆಸುವಂತೆ ಯುಟಿ ಖಾದರ್‌ ಎಫ್‌ಡಿಎ ತಂಡಕ್ಕೆ ಸೂಚನೆ ನೀಡಿದ್ದಾರೆ.
ಪಿಜಿಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಬಗ್ಗೆ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ಇಲಾಖೆಯ ಕ್ಯೂಆರ್‌ ಕೋಡ್ ಮತ್ತು ಸಾರ್ವಜನಿಕರು ನೀಡಿರುವ ದೂರಿನ ಮೇಲೆ ದಾಳಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದ್ದು ಪಿಜಿ ಬಳಿಕ ಸರ್ಕಾರಿ ಹಾಸ್ಟೆಲ್‌ಗಳ ತಪಾಸಣೆಗೆ ಕೂಡ ಸೂಚನೆ ನೀಡಲಾಗಿದೆ.

















































error: Content is protected !!
Scroll to Top