ಕಾರ್ಕಳ : ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಬೇಕಾದರೆ ಸಂಸ್ಕೃತ ಭಾಷೆ ಹಾಗೂ ಅದರಲ್ಲಿರುವ ವಿಚಾರಗಳನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಎಂದು ಡಾ. ಕಾರ್ತಿಕ್ ರಾವ್ ಅಭಿಪ್ರಾಯಪಟ್ಟರು. ಅವರು ಶ್ರೀಮದ್ಭುವನೇಂದ್ರ ಪ್ರೌಢ ಶಾಲೆಯಲ್ಲಿ ಶ್ರಾವಣ ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಎಸ್. ನಿತ್ಯಾನಂದ ಪೈ, ಸಂಸ್ಕೃತ ಕವಿಗಳ ಹಾಗೂ ಕಾವ್ಯಗಳ ಮಹತ್ವ ತಿಳಿಸಿದರು. ಶಾಲಾ ಸಂಚಾಲಕ ನರೇಂದ್ರ ಕಾಮತ್ ಕೆ. ಮಾತನಾಡಿದರು. ನಿವೃತ್ತ ಸಂಸ್ಕೃತ ಶಿಕ್ಷಕ ದಿ. ಮುಕುಂದ ಭಟ್ ಅವರ ಸ್ಮರಣಾರ್ಥ ಸಂಸ್ಕೃತದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ, ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಪ್ರಭು, ಸುಧಾ ಮೋಹನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕಾವ್ಯ, ಯಾಜ್ಞಿಕ ಪ್ರಾರ್ಥಿಸಿದರು. ಸಾನ್ವಿ ಸ್ವಾಗತಿಸಿ, ಹರಿಪ್ರಿಯಾ ವಂದಿಸಿದರು. ಧಾರಿಣಿ, ಸಾನ್ವಿ ಹಾಗೂ ನಿಶ್ಮಾ ಕಾರ್ಯಕ್ರಮ ಸಹಕರಿಸಿದರು.
ಸಂಸ್ಕೃತಿ ಭಾಷೆ ವಿಚಾರಗಳಿಂದ ಉತ್ತಮ ಸಂಸ್ಕಾರ – ಡಾ. ಕಾರ್ತಿಕ್ ರಾವ್
























