ನನ್ನೊಂದಿಗೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ಯಾರು ತಯಾರಿದ್ದೀರಿ ಬನ್ನಿ ರಾಯರೆಡ್ಡಿ ಸವಾಲ್‌

ಧರ್ಮದ ಬಗ್ಗೆ ಅವರಿಗಿಂತ ಚೆನ್ನಾಗಿ ಗೊತ್ತು ಎಂದ ಸಚಿವ

ಕೊಪ್ಪಳ: ನನ್ನ ಜೊತೆ ಹಿಂದೂ ಧರ್ಮದ ಬಗ್ಗೆ ಯಾರು ಚರ್ಚೆ ಮಾಡೋಕೆ ತಯಾರಿದ್ದೀರಿ ಬನ್ನಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಪಕ್ಷಗಳು ಹಾಗೂ ಟೀಕಾಕಾರರಿಗೆ ಸವಾಲ್‌ ಎಸೆದರು.
ತಡರಾತ್ರಿ ಕೊಪ್ಪಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಜಗತ್ತಿನಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕವಾದ ಧರ್ಮವಾಗಿದ್ದು ನನಗೆ ಮಕ್ಕಾ-ಮದೀನಾದ ಹಜ್ ಯಾತ್ರೆಗೆ ಹೋಗುವ ತೀವ್ರ ಆಸೆಯಿದೆ ಎನ್ನುವ ತಮ್ಮದೇ ಹೇಳಿಕೆಗೆ ವ್ಯಕ್ತವಾದ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಶಿವಕುಮಾರ್ ಅವರು ನನ್ನ ಹೇಳಿಕೆ ಬಗ್ಗೆ ಏನೂ ಮಾತಾಡಿಲ್ಲ ಏನ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಿದ್ಯಲ್ಲಾ ಅಂತಷ್ಟೇ ಅಂದ್ರು. ನನ್ನ ಬಳಿ ಆ ಹೇಳಿಕೆ ಕುರಿತು ಏನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು.
ನಾನು ಯಾವ ಧರ್ಮವನ್ನೂ ಬೈಯಲೇ ಇಲ್ವಲ್ಲಾ? ನಾನು ಅಲ್ಲಿಗೆ ಹೋದಾಗ ಅವರನ್ನ ಬೈಯ್ಯೋಕೆ ಆಗುತ್ತಾ? ಅದು ಸ್ಟುಪಿಡ್ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ತಿರುಗೇಟು ಕೊಟ್ಟ ರಾಯರೆಡ್ಡಿ ಅವರು ನನ್ನ ಜೊತೆ ಹಿಂದೂ ಧರ್ಮದ ಬಗ್ಗೆ ಯಾರು ಚರ್ಚೆ ಮಾಡೋಕೆ ತಯಾರಿದ್ದೀರಿ ಬನ್ನಿ ಎಂದು ಸವಾಲೆಸೆದರು.

ನಾನು ಉಪನಿಷತ್‌ ಮಾತಾಡ್ತೀನಿ ಯಾರಾದ್ರೂ ಇದ್ರೆ ಬರಲಿ ಎಂದ ರಾಯರೆಡ್ಡಿ, ಪ್ರತಾಪ್ ಸಿಂಹ ಅಂದ ತಕ್ಷಣ ಯಾರಿದಾರೆ ಬರಲಿ ಎಂದು ಸಿಡಿಮಿಡಿಗೊಂಡರು. ನಾನು ಯಾವ ಧರ್ಮವನ್ನೂ ಬೈದಿಲ್ಲ ಬೈಯೋದು ಇಲ್ಲ ಧರ್ಮದ ಬಗ್ಗೆ ಅವರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ಕಿಡಿ ಕಾರಿದ್ರು.



































error: Content is protected !!
Scroll to Top