ವಿದ್ಯಾರ್ಥಿಗಳ ಪ್ರತಿಭೆಗೆ ‘ವಿಂಗ್ಸ್ ಆಫ್ ವಿಸ್ಡಮ್’ ಉತ್ತಮ ವೇದಿಕೆ – ಶಶಿಧರ ಶೆಟ್ಟಿ ಬರೋಡಾ
ಮಂಗಳೂರು : ವೇಣೂರು ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆ. 5ರಂದು ಶಾಲೆಯ ಮಾಸಿಕ ನಿಯತಕಾಲಿಕೆ ʼವಿಂಗ್ಸ್ ಆಫ್ ವಿಸ್ಡಮ್ʼ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಶಶಿಧರ ಶೆಟ್ಟಿ ಬರೋಡಾ ಅವರು ನಿಯತಕಾಲಿಕೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯಾಸಕ್ತಿ, ಬರವಣಿಗೆ ಕೌಶಲ್ಯ ಹಾಗೂ ಸೃಜನಶೀಲ ಪ್ರತಿಭೆಯನ್ನು ಬೆಳೆಸುವಲ್ಲಿ ಇಂತಹ ನಿಯತಕಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜದ ಮುಂದೆ ಪರಿಚಯಿಸುವ ಉತ್ತಮ ವೇದಿಕೆಯಾಗಿರುವ ಈ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಡಾ. ಶರತ್ ಗೋರೆ, ಪ್ರಾಂಶುಪಾಲ ಡಾ. ಶಶಿಧರ್, ಕಾರ್ಯದರ್ಶಿ ಶಾಂಭವಿ ಗೋರೆ, ಯು.ಕೆ. ಕನ್ಸ್ಟ್ರಕ್ಷನ್‌ನ ಮಾಲಕ ಮಹಮ್ಮದ್ ಇರ್ಫಾನ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.




















