ಯೂತ್ ಬಿಲ್ಲವ ನೂತನ ಅಧ್ಯಕ್ಷರಾಗಿ ಶರತ್‌ ಬೈಲಡ್ಕ – ಪ್ರಧಾನ ಕಾರ್ಯದರ್ಶಿಯಾಗಿ ಅಭಿಲಾಷ್ ಕೋಟ್ಯಾನ್

ಕಾರ್ಕಳ : ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪೆರ್ವಾಜೆ ಪತ್ತೊಂಜಿಕಟ್ಟೆಯ ಶರತ್‌ ಬೈಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ತೆಳ್ಳಾರಿನ ಅಭಿಲಾಷ್‌ ಕೋಟ್ಯಾನ್‌ ಆಯ್ಕೆಯಾಗಿದ್ದಾರೆ. ಜೂ.28ರಂದು ಪೆರ್ವಾಜೆ ಬಿಲ್ಲವ ಸಭಾಭವನದಲ್ಲಿ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಧ್ಯಕ್ಷರಾಗಿ ಭಾಸ್ಕರ್ ಎಸ್. ಕೋಟ್ಯಾನ್ ಮತ್ತು ಪ್ರಮಲ್ ಕುಮಾರ್, ಉಪಾಧ್ಯಕ್ಷರಾಗಿ ರವಿರಾಜ್ ಪೂಜಾರಿ ಮತ್ತು ಸುಧೀರ್ ಪೂಜಾರಿ, ಜತೆಕಾರ್ಯದರ್ಶಿಯಾಗಿ ಶ್ರವಣ್ ಅಂಚನ್, ಕೋಶಾಧಿಕಾರಿಯಾಗಿ ಸುಜಿತ್ ನಿಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಪೂಜಾರಿ ಯರ್ಲಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಮಿಯ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಿತ್ ಮುಂಡ್ಲಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್ ಸುವರ್ಣ, ವಿಶಾಲ್ ಸಾಲಿಯಾನ್, ರವೀಂದ್ರ ಪೂಜಾರಿ ಶಿರ್ಲಾಲ್, ಕರುಣಾಕರ ಪೂಜಾರಿ, ಶ್ರೇಯಸ್ ಪೂಜಾರಿ ಹಾಗೂ ಸುದೇಶ್ ನಿಟ್ಟೆ ಆಯ್ಕೆಯಾಗಿದ್ದಾರೆ.















































































































































error: Content is protected !!
Scroll to Top