ಕಾರ್ಕಳ : ಅನಂತಶಯನ ಎಸ್‌ಬಿಐ ಬ್ಯಾಂಕ್‌ನ ನಗದು ಅಧಿಕಾರಿ, ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಜಯರಾಮ ಕೆ. ಅವರು ಜೂ. 30ರಂದು ನಿವೃತ್ತಿ ಹೊಂದಲಿದ್ದಾರೆ. 1988ರಲ್ಲಿ ಬೆಳ್ತಂಗಡಿ ಎಸ್‌ಬಿಐ ಬ್ಯಾಂಕ್‌ಗೆ ಸೇರ್ಪಡೆಗೊಂಡ ಜಯರಾಮ ಅವರು ಬಳಿಕ ಮೂಡುಬಿದಿರೆ, ಕಾರ್ಕಳ ಸಾಲ್ಮರ ಬ್ರಾಂಚ್‌ನಲ್ಲಿ ಕರ್ತವ್ಯ ಸಲ್ಲಿಸಿ, ನಂತರ ಕಾರ್ಕಳ ಅನಂತಶಯನ ಶಾಖೆಗೆ ವರ್ಗಾವಣೆಗೊಂಡಿದ್ದರು. ಜಯರಾಮ ಕೆ. ಅವರು ಪತ್ನಿ ಪ್ರಾರ್ಥನಾ, ಪುತ್ರ ಪ್ರಜ್ವಲ್ ಹಾಗೂ ಪುತ್ರಿ ಪೃಥ್ವಿಯೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.
ನೆಚ್ಚಿನ ಅಧಿಕಾರಿ
ತನ್ನ ಸೇವೆಯ ಮೂಲಕವೇ ಎಸ್‌ಬಿಐ ಗ್ರಾಹಕರ ನೆಚ್ಚಿನ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಜಯರಾಮ ಅವರು ಸಂಘ – ಸಂಸ್ಥೆಗಳಲ್ಲೂ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡವರು. ಕಳೆದ 8 ವರ್ಷಗಳಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಾರಿಗುಡಿ ಸೇವಾ ಸಮಿತಿ, ಲಯನ್ಸ್ ಕ್ಲಬ್ ಕಾರ್ಕಳದ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ.






































































