ಜು. 4 : ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆ – ರಕ್ತದಾನ ಶಿಬಿರ

ಕಾರ್ಕಳ : ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿಯವರ 7ನೇ ಪುಣ್ಯಸ್ಮರಣೆಯ ಪ್ರಯುಕ್ತ ಜು. 4ರಂದು ತಾಲೂಕು ಕಚೇರಿ ಬಳಿಯಿರುವ ದೇವಾಡಿಗ ಸುಧಾರಕ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ರಕ್ತದಾನ ಶಿಬಿರ ಹಾಗೂ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಟ್ಟದ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು ಪಾಲ್ಗೊಳ್ಲಲಿದ್ದಾರೆ. ಬ್ಲಾಕ್ ಮಟ್ಟದ ಪಕ್ಷದ ಪಧಾದಿಕಾರಿಗಳು, ಸದಸ್ಯರು,‌ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















































































error: Content is protected !!
Scroll to Top