ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ – ದೂರು ದಾಖಲು

ಕಾರ್ಕಳ : ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡಿರುವ ಬಗ್ಗೆ ಜೂ. 29ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಡ್‌ ಕಾನ್ಸ್‌ಟೇಬಲ್‌ ನಾಗರಾಜ ಅವರು ಸಾಣೂರು ಗ್ರಾಮದ ಬಾರಾಡಿ ಕ್ರಾಸ್‌ ಬಳಿ ಚೆಕ್‌ಪೋಸ್ಟ್‌ ಕರ್ತವ್ಯದಲ್ಲಿದ್ದಾಗ ಮೂಡುಬಿದಿರೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ KA-19-AD-8314ನೇ ನಂಬ್ರದ ಲಾರಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ತುಂಬಿದ್ದ ಕೆಂಪು ಕಲ್ಲುಗಳ ಬಗ್ಗೆ ಲಾರಿ ಚಾಲಕಕನ್ನು ವಿಚಾರಿಸಿದಾಗ ಮೂಡುಬಿದಿರೆಯ ಕೊಡ್ಯಡ್ಕ ಎಂಬಲ್ಲಿ ಯಾವುದೋ ಸರಕಾರಿ ಸ್ಥಳದಿಂದ ಕಳವು ಮಾಡಿ ತೆಗೆದಿರಿಸಿದ 300 ಕೆಂಪು ಕಲ್ಲುಗಳನ್ನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾಗಾಟ ಮಾಡಿರುವುದಾಗಿ ತಿಳಿದು ಬಂದಿದೆ.































error: Content is protected !!
Scroll to Top