ಬೀಡಿ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಕಲ್ಯಾಣ ಸಂಸ್ಥೆಯಿಂದ ವಿದ್ಯಾರ್ಥಿ ವೇತನ

ಬೆಂಗಳೂರು : ಬೀಡಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆಯು ವಿದ್ಯಾರ್ಥಿ ವೇತನ ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 1ರಿಂದ 10ನೇ ತರಗತಿವರೆಗೆ ಆಗಸ್ಟ್‌ 31 ಹಾಗೂ ಪ್ರಥಮ ಪಿಯುಸಿ ಮೇಲಿನ ತರಗತಿಯವರು ಅಕ್ಟೋಬರ್‌ 31ರ ಮುನ್ನ ಅರ್ಜಿ ಸಲ್ಲಿಸಬಹುದಾಗಿದೆ.

1ರಿಂದ 4ನೇ ವಿದ್ಯಾರ್ಥಿಗಳಿಗೆ 1 ಸಾವಿರ ರೂ., 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 1,500 ರೂ., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 2 ಸಾವಿರ ರೂ., ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಡಿಪ್ಲೋಮಾ, ಐಟಿಐ, ಪಾಲಿಟೆಕ್ನಿಕ್‌ ಹಾಗೂ ಪದವಿ ಕೋರ್ಸ್‌ ವಿದ್ಯಾರ್ಥಿಗಳಿಗೆ 6 ಸಾವಿರ ರೂ., ವೃತ್ತಿಪರ ಪದವಿ ಕೋರ್ಸ್‌ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ವಿದ್ಯಾರ್ಥಿ ವೇತನ ದೊರೆಯಲಿದೆ ಎಂದು ಕಾರ್ಮಿಕ ಕಲ್ಯಾಣ ಸಂಸ್ಥೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ವಿಧಾನ
scholarships.gov.in ವೆಬ್‌ಸೈಟ್‌ ತೆರೆದು ಅಲ್ಲಿ ಎಡಭಾಗದಲ್ಲಿರುವ students ಬಟನ್ ಕ್ಲಿಕ್‌‌ ಮಾಡಬೇಕು. ಬಳಿಕ OTR, ನೋಂದಣಿ ಕ್ಲಿಕ್‌ ಮಾಡಬೇಕು. ಬಳಿಕ ಸೂಚನೆಗಳನ್ನು ಓದಿ, “ನಾನು ಒಪ್ಪುತ್ತೇನೆ” ಕ್ಲಿಕ್‌ ಮಾಡಿ, ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದಿಸಬೇಕಿದೆ. ಆ ಬಳಿಕ OTR ಪರಿಶೀಲಿಸಿ, ಕ್ಯಾಪ್ಚಾ ನಮೂದಿಸಿ, ಸಂಪೂರ್ಣ ಇ – ಕೆವೈಸಿ ಬಳಿಕ ನೋಂದಣಿಯನ್ನು ಪೂರ್ಣಗೊಳಿಸಬೇಕು. SMS ಮೂಲಕ ಉಲ್ಲೇಖ ಸಂಖ್ಯೆಯನ್ನು ಸ್ವೀಕರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಕಳ ಬಂಡಿಮಠದಲ್ಲಿರುವ ಬೀಡಿ ಕಾರ್ಮಿಕರ ವೈದ್ಯಾಧಿಕಾರಿಯವರನ್ನು (9148240554) ಸಂಪರ್ಕಿಸಬಹುದಾಗಿದೆ.





























error: Content is protected !!
Scroll to Top