ಜೂ. 28-29 : ಕಾರ್ಕಳ ಕಾಂಗ್ರೆಸ್ ವತಿಯಿಂದ ಎಸ್ಐಆರ್ ಮಾಹಿತಿ ಕಾರ್ಯಗಾರ

ಕಾರ್ಕಳ : ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಕಾರ್ಕಳ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ‌ಮುಖಂಡ ಉದಯ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜೂ. 28 ಮತ್ತು 29ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಆರು ವಲಯಗಳಲ್ಲಿ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಮತ್ತು ಬಿಎಲ್ಎ2 ಗಳಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಂಡಿದೆ. ಸಂಪನ್ಮೂಲ ‌ವ್ಯಕ್ತಿಯಾಗಿ ಬೆಂಗಳೂರಿನ ಖ್ಯಾತ ತರಬೇತುದಾರ ಸೈಯದ್ ಖಲೀಲುಲ್ಲಾ ಭಾಗಿಯಾಗಲಿದ್ದಾರೆ.

ಎಲ್ಲೆಲ್ಲಿ ಯಾವಾಗ ?
ಜೂ. 28ರಂದು ಮಧ್ಯಾಹ್ನ 2:30ಕ್ಕೆ ಹೆಬ್ರಿಯ ಚೈತನ್ಯ ಸಭಾಂಗಣ,‌ ಸಂಜೆ 4 ಗಂಟೆಗೆ ಅಜೆಕಾರು ರಚನಾ ಹೊಟೇಲ್, 5:30ಕ್ಕೆ ಕಾರ್ಕಳ ಪುರಸಭಾ ವ್ಯಾಪ್ತಿಯ ಹೋಟೇಲ್ ಮಯ್ಯೂರದಲ್ಲಿ ಆಯೋಜಿಸಲಾಗಿದೆ. ಜೂ. 29‌ರಂದು ಮಧ್ಯಾಹ್ನ 2:30ಕ್ಕೆ ಕುಕ್ಕುಂದೂರು ದೇವಿಕೃಪಾ ಸಭಾಭವನ‌, ಸಂಜೆ 4 ಗಂಟೆಗೆ ಬಜಗೋಳಿಯ ಹೊಟೇಲ್ ಚಿರಾಗ್, 5:30ಕ್ಕೆ ಬೆಳ್ಮಣ್‌ ಹೋಟೆಲ್ ಸೂರಜ್‌ನಲ್ಲಿ ಆಯೋಜಿಸಲಾಗಿದೆ.

ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕಾದರೆ ಎಸ್.ಐ.ಆರ್ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಅನಿವಾರ್ಯವಾಗಿದ್ದು, ಪಕ್ಷದ ವತಿಯಿಂದ ಅವಕಾಶವನ್ನು ಕಲ್ಪಿಸಲಾಗಿದೆ. ಪಕ್ಷದ ಬಿಎಲ್ಎ2, ವಾರ್ಡ್ ಅಧ್ಯಕ್ಷರು ಸೇರಿ ಒಂದು ವಾರ್ಡಿನಿಂದ ಐದು ಜನ ಕಾರ್ಯಕರ್ತರು ಭಾಗವಹಿಸುವುದು ಕಡ್ಡಾಯವಾಗಿದ್ದು ಸಾರ್ವಜನಿಕರೂ ಕೂಡ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಹಾಗೂ ಗೋಪಿನಾಥ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























error: Content is protected !!
Scroll to Top