ಕಾರ್ಕಳ : ಜೇಸಿಐ ಭಾರತ ವಲಯ 15ರ ಸೌಪರ್ಣಿಕಾ ಪ್ರಾಂತ್ಯ ಸಿಯ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಜೆಸಿಐ ಕಾರ್ಕಳ ರೂರಲ್ ಪಡೆದುಕೊಂಡಿದೆ. ಕಳೆದ ವರ್ಷ ದಶಮಾನೋತ್ಸವದ ಸಂಭ್ರಮ ಆಚರಿಸಿದ ಈ ಘಟಕ ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಂಡ ವಿವಿಧ ಜನಮನ್ನಣೆಯ ಕಾರ್ಯಕ್ರಮಗಳಿಗಾಗಿ ಈ ಪ್ರಶಸ್ತಿ ದೊರೆತಿದೆ.
ಕಾಪು ಇನಾಸನ್ ಆಡಿಟೋರಿಯಂನಲ್ಲಿ ನಡೆದ ವಲಯ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿಯವರು ಘಟಕದ ಅಧ್ಯಕ್ಷ ಸೃಜನ್ ಪೂಜಾರಿಯವರಿಗೆ ಪ್ರಶಸ್ತಿ ನೀಡಿದರು. ಈ ಸಂದರ್ಭ ವಲಯ ಉಪಾಧ್ಯಕ್ಷರಾದ ಡಾ ಹರಿಣಾಕ್ಷಿ ಕರ್ಕೇರ, ಅರುಣ್ ಮಾಂಜ, ಘಟಕದ ಸ್ಥಾಪಕರಾದ ಸತೀಶ್ ಪೂಜಾರಿ ಕಲತ್ರಪಾದೆ, ಲೇಡಿ ಜೇಸಿ ಸಂಯೋಜಕಿ ಮಮತಾ ಸಂತೋಷ್, ಪೂರ್ವಾಧ್ಯಕ್ಷರಾದ ವೀಣಾ ರಾಜೇಶ್, ಮಂಜುನಾಥ ಕೋಟ್ಯಾನ್ ಹಾಗೂ ರಕ್ಷಣ್, ವರ್ಷಿತ್ ಉಪಸ್ಥಿತರಿದ್ದರು.
ಜೆಸಿಐ ಕಾರ್ಕಳ ರೂರಲ್‌ಗೆ ಅತ್ಯುತ್ತಮ ಘಟಕ ಪ್ರಶಸ್ತಿ
























