ರಾಜೇಶ್‌ ಅವರಿಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ

ಕಾರ್ಕಳ : ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್‌ಐ ರಾಜೇಶ್‌ ಪಿ. ಅವರು 2025-26ನೇ ಸಾಲಿನ ‘ಡಿಜಿ-ಐಜಿಪಿ ಪ್ರಶಂಸನಾ ಪದಕ’ಕ್ಕೆ ಭಾಜನರಾಗಿದ್ದಾರೆ. ಇವರು ಈ ಮೊದಲು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ಸಲ್ಲಿಸಿದ್ದರು.

ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಎಸ್ಪಿ, ಎಸಿಪಿ/ ಡಿವೈಎಸ್ಪಿಗಳು, ಕೆಎಸ್‌ಆರ್‌ಪಿ ಕಮಾಂಡೆಂಟ್‌ಗಳು, ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐ, ಎಎಸ್‌ಐ ಹಾಗೂ ಕಾನ್ಸ್‌ಟೆಬಲ್‌ ಹಂತದವರೆಗೆ 200 ಮಂದಿಗೆ ಪದಕ ಘೋಷಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಸೋಮವಾರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಐವರಿಗೆ ಪ್ರಶಸ್ತಿ
ಉಡುಪಿ ಜಿಲ್ಲೆಯಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ ಎ.ಎಸ್.ಐ. ರಾಜೇಶ್ ಪಿ., ಜಿಲ್ಲಾ ಸಶಸ್ತ್ರ ಪಡೆಯ ಎಸ್.ಐ ಸುಧಾಕರ ಎ. ಆರ್., ಮೆಸ್ಕಾಂ ಹೆಚ್.ಸಿ.
ಸಿ. ವಿಜಯಕುಮಾರ್, ಜಿಲ್ಲಾ ಸಶಸ್ತ್ರ ಪಡೆ ಎ.ಎಚ್.ಸಿ. ನಾಗರಾಜ ಪ್ರಭು, ಉಡುಪಿ ನಗರ ಪೊಲೀಸ್ ಠಾಣೆಯ ಸಿಪಿಸಿ ಶಿವಕುಮಾರ್ ಹೆಚ್.ಎಂ. ಪದಕಕ್ಕೆ ಆಯ್ಕೆಯಾಗಿದ್ದಾರೆ.





























error: Content is protected !!
Scroll to Top