ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬ ಸಂಭ್ರಮಾಚರಣೆ – ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಾರ್ಕಳ : ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಕಾರ್ಕಳ ತಾಲೂಕಿನ ವಿವಿಧ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ ಪುಸ್ತಕ ವಿತರಿಸಿದರು.

ಅಯ್ಯಪ್ಪನಗರ ಶಾಲೆ


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಯ್ಯಪ್ಪ ನಗರ ಕುಕ್ಕುಂದೂರು ಇಲ್ಲಿನ ವಿದ್ಯಾರ್ಥಿಗಳಿಗೆ ಜೂ. 16ರಂದು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ರಾವ್, ರಘುನಾಥ್ ಶೆಟ್ಟಿ, ಎಸ್.ಡಿ.ಎಂ. ಅಧ್ಯಕ್ಷ ಪ್ರತಿಮಾ, ಸಂಘದ ನಿರ್ದೇಶಕ ದಿನೇಶ್ ಕುಮಾರ್ ವೈ, ಶಾಲಾ ಮುಖ್ಯ ಶಿಕ್ಷಕಿ ರೇವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ಹಾಗೂ ಸಿಬ್ಬಂದಿ ನಿರೀಕ್ಷಾ ಉಪಸ್ಥಿತರಿದ್ದರು.ಸರಕಾರಿ

ಕಾಬೆಟ್ಟು ಪ್ರೌಢಶಾಲೆ

ಕಾಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಜೂ. 17ರಂದು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ ರಾವ್, ಸಂಘದ ನಿರ್ದೇಶಕ ಯೋಗಿಶ್ ಸಾಲಿಯಾನ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಶ್ರೀ ಹಾಗೂ ಸಿಬ್ಬಂದಿ ನಿರೀಕ್ಷಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಅಬ್ದುಲ್ ಜಲೀಲ್ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಸುನೀತಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಮಾಲಿನಿ ವಂದಿಸಿದರು























error: Content is protected !!
Scroll to Top