ಕರಿಯಕಲ್ಲು ಶನೀಶ್ವರ ದೇವರ ಬೆಳ್ಳಿಯ ಕಣ್ಣುಗಳು ಕಳವು – ಕಳ್ಳನ ಬಂಧನ

ಕಾರ್ಕಳ : ಕರಿಯಕಲ್ಲು ಶ್ರೀ ಶನೀಶ್ವರ ದೇವಸ್ಥಾನದಲ್ಲಿ ದೇವರಿಗೆ ಅಳವಡಿಸಲಾಗಿದ್ದ ಬೆಳ್ಳಿಯ ಕಣ್ಣುಗಳನ್ನು ಕಳವುಗೈದ ಕಳ್ಳನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಎಂ.ಡಿ. ಸರ್ಫಸ್‌ ಬಂಧಿತ.

ಜೂ. 16ರಂದು ಬೆಳಿಗ್ಗೆ 7ಗಂಟೆಗೆ ದೇವಸ್ಥಾನದ ಸಮಿತಿಯ ಸದಸ್ಯರೊಬ್ಬರು ದೇವಸ್ಥಾನಕ್ಕೆ ಹೋಗಿದ್ದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿರುತ್ತದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್‌ಐಆರ್‌ ಆದ ಆರೇ ಗಂಟೆಯಲ್ಲಿ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.























error: Content is protected !!
Scroll to Top