ತಿಂಗಳೊಳಗೆ ದೂಪದಕಟ್ಟೆ ಸ್ಪೀಡ್ ರಾಡಾರ್ ಗೆ ಬಿತ್ತು ಬ್ರೇಕ್

ಕಾರ್ಕಳ : ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆಗೆ ಕಡಿವಾಣ ಹಾಕಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ರಾಷ್ಟ್ರೀಯ ಹೆದ್ದಾರಿಯ ಪ್ರಮುಖ 6 ಆಯಕಟ್ಟಿನ ಸ್ಥಳಗಳಲ್ಲಿ ಮೇ 22ರಂದು ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮೆರಾ ವ್ಯವಸ್ಥೆಯನ್ನು ಅಳವಡಿಸಿತ್ತು. ಆದರೆ, ಇದೀಗ ಇದರಲ್ಲಿ ಕಾರ್ಕಳ ತಾಲೂಕಿನ ದೂಪದಕಟ್ಟೆಯಲ್ಲಿನ ಕ್ಯಾಮೆರಾ ವರ್ಕ್‌ ಆಗ್ತಿಲ್ಲ.

ಈ ಅತ್ಯಾಧುನಿಕ ರಾಡಾರ್ ಕ್ಯಾಮೆರಾ ಅತಿವೇಗ ಚಾಲನೆ, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದಿರುವುದು, ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಸುತ್ತಾ ಚಾಲನೆ ಮಾಡುವುದು, ತಪ್ಪು ದಿಕ್ಕಿನಲ್ಲಿ ಚಾಲನೆ ಸೇರಿದಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಸೆರೆಹಿಡಿಯುತ್ತದೆ. ಕಾರ್ಕಳ – ದೂಪದಕಟ್ಟೆ., ಪಡುಬಿದ್ರೆ – ಉಚ್ಚಿಲ, ಕಾಪು – ದಂಡತೀರ್ಥ, ಕೋಟ – ತೆಕ್ಕಟ್ಟೆ, ಗಂಗೊಳ್ಳಿ – ತ್ರಾಸಿ ಹಾಗೂ ಬೈಂದೂರು – ನಾಯಕನ ಕಟ್ಟೆಯಲ್ಲಿ ಈ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ನೇರ ಸಂಪರ್ಕವನ್ನು ಜಿಲ್ಲಾ ನಿಯಂತ್ರಣ ಕೊಠಡಿಗೆ ನೀಡಲಾಗಿದೆ. ಅಲ್ಲಿಂದಲೇ ಸಿಬ್ಬಂದಿ 24×7 ವಾಹನಗಳ ಚಲನವಲನಗಳನ್ನು ಹದ್ದಿನ ಕಣ್ಣಿನಿಂದ ಮಾನಿಟರ್ ಮಾಡುತ್ತಾರೆ. ನಿಯಮ ಉಲ್ಲಂಘಿಸಿದ ತಕ್ಷಣವೇ ಡಿಜಿಟಲ್ ಸಾಕ್ಷ್ಯಗಳೊಂದಿಗೆ ದಂಡದ ಚಲನ್‌ಗಳನ್ನು ಸಿದ್ಧಪಡಿಸಿ, ವಾಹನ ಮಾಲೀಕರ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತದೆ.

ದೂಪದಕಟ್ಟೆಯಲ್ಲಿ ಕ್ಯಾಮೆರಾ ಅಳವಡಿಕೆ ಮಾಡಿದ ಬಳಿಕ ಸಂಚಾರಿ ನಿಯಮಗಳ ಉಲ್ಲಂಘನೆಗೆ ಮುಖ್ಯವಾಗಿ ವೇಗದ ಚಲಾವಣೆಗೆ ಕಡಿವಾಣ ಬಿದ್ದಂತಾಗಿತ್ತು. ಆದರೆ ಇದೀಗ ಕಳೆದ ಒಂದು ವಾರದಿಂದ ಈ ಕ್ಯಾಮೆರಾ ವರ್ಕ್‌ ಆಗದೆ ಇದ್ದು, ಮತ್ತೆ ಸಂಚಾರಿ ನಿಯಮ ಉಲ್ಲಂಘನೆಗೆ ದಾರಿ ಮಾಡಿಕೊಟ್ಟಂತಾಗಿದೆ.























error: Content is protected !!
Scroll to Top