ಪತ್ನಿಗೆ ಪತಿ ಹಾಗೂ ಅತ್ತೆ-ಮಾವನಿಂದ ದೈಹಿಕ, ಮಾನಸಿಕ ಕಿರುಕುಳ; ಪ್ರಕರಣ ದಾಖಲು

ಅಜೆಕಾರು: ಮೊಬೈಲ್ ಚಾಟಿಂಗ್ ವಿಷಯವಾಗಿ ಪ್ರಶ್ನಿಸಿದ್ದಕ್ಕೆ ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಪತಿ ಮತ್ತು ಅತ್ತೆ-ಮಾವನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ದೀಪ್ತಿ (24) ಎಂಬುವವರು ದೂರು ನೀಡಿದ್ದು, ಆರೋಪಿಗಳನ್ನು ಪತಿ ದೀಪಕ್ ಶೆಟ್ಟಿ, ಅತ್ತೆ ಶೋಭ ಮತ್ತು ಮಾವ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಮದುವೆಯಾದ ಬಳಿಕ ಅಜೆಕಾರಿನಲ್ಲಿ ವಾಸವಿದ್ದಾಗ ಪತಿ ಸಮಾಜಿಕ ಜಾಲತಾಣಗಳಲ್ಲಿ ಅನ್ಯರೊಂದಿಗೆ ಚಾಟ್ ಮಾಡುತ್ತಿದ್ದನ್ನು ದೀಪ್ತಿ ಪ್ರಶ್ನಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಕಲಹ ಉಂಟಾಗಿದ್ದು, ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆರೈಕೆ ಮಾಡದೆ ಪತಿ ತನ್ನನ್ನು ತವರು ಮನೆಗೆ ಬಿಟ್ಟು ಹೋಗಿದ್ದರು ಹಾಗೂ ಹೆರಿಗೆಯ ಖರ್ಚು ವೆಚ್ಚವನ್ನೂ ಭರಿಸದೆ ಸತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
​ಮತ್ತೆ ಪತಿಯ ಮನೆಗೆ ಮರಳಿದಾಗ ಪತಿಯು ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿದ್ದಲ್ಲದೆ, ಅತ್ತೆ-ಮಾವ ಕೂಡ ಬೆಂಬಲ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಮಗುವಿನೊಂದಿಗೆ ತವರು ಮನೆಯಲ್ಲಿರುವ ತಮಗೆ ಪತಿ ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೀಪ್ತಿ ದೂರಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಅಜೆಕಾರು ಠಾಣೆಗೆ ವರ್ಗಾವಣೆಯಾಗಿದ್ದು, ಬಿಎನ್ಎಸ್ ಕಲಂ 85, 115(2), 352, 351(2) ಹಾಗೂ 3(5) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ































































































































































error: Content is protected !!
Scroll to Top