ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗದಲ್ಲಿ ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳು 597 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ. ಚೈತ್ರಿಕಾ ಚೌಧರಿ (ಕಾರ್ಕಳ), ವೈಷ್ಣವಿ ಕುಲಕರ್ಣಿ (ಕಾರ್ಕಳ), ಆರ್ನವಿ (ಉಡುಪಿ) 600ರಲ್ಲಿ 597 ಅಂಕ ಪಡೆದು ಸಾಧಕ ವಿದ್ಯಾರ್ಥಿನಿಯರು. ವಾಣಿಜ್ಯ ವಿಭಾಗದಲ್ಲಿ ಶಾನ್ವಿ ದಿನೇಶ್ 595 (ಕಾರ್ಕಳ), ಚಾನ್ವಿ 593 (ಕಾರ್ಕಳ), ಪ್ರಥುಲ್ ಡಿ. 592 (ಕಾರ್ಕಳ), ರಕ್ಷಿತ್ 592 (ಮಣಿಪಾಲ), ಸಜನ್ 591 (ಮಣಿಪಾಲ) ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 44 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಪಡೆದಿದ್ದು ಕಾರ್ಕಳ, ಉಡುಪಿ, ಮಣಿಪಾಲ ಜ್ಞಾನಸುಧಾ ಕಾಲೇಜು ಶೇ. 100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 5 ವಿದ್ಯಾರ್ಥಿಗಳು 590 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.



















