ಕಾರ್ಕಳ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಆಶಯ್ ಜೈನ್ ಅವರು 600ರಲ್ಲಿ 593 ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಈತ ಭೌತಶಾಸ್ತ್ರ, ಗಣಿತ ಹಾಗೂ ಗಣಕವಿಜ್ಞಾನ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಉಳಿದಂತೆ ಹಿಂದಿಯಲ್ಲಿ 99, ರಸಾಯನಶಾಸ್ತ್ರದಲ್ಲಿ 98 ಹಾಗೂ ಇಂಗ್ಲಿಷ್‌ನಲ್ಲಿ 96 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು ಶೇ. 98.83 ಅಂಕ ಗಳಿಸಿರುವ ಆಶಯ್, ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈತ ಉದ್ಯಮಿ ಕಾರ್ಕಳ ನಿರಂಜನ್ ಜೈನ್ ಹಾಗೂ ಪ್ರಭಾ ನಿರಂಜನ್ ಜೈನ್ ಅವರ ಪುತ್ರ.
ಭುವನೇಂದ್ರ ಕಾಲೇಜಿನ ಆಶಯ್ ಜೈನ್‌ಗೆ ವಿಜ್ಞಾನ ವಿಭಾಗದಲ್ಲಿ 593










































































