ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಭ್ರಮದ ಈದುಲ್‌ ಫಿತ್ರ್

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಕಾರ್ಕಳ ಜಾಮೀಯಾ ಮಸೀದಿ, ಹಂಚಿಕಟ್ಟೆ ಆಯಿಷಾ, ಬಜಗೋಳಿ, ಮದೀನಾ, ಅತ್ತೂರು ನೂರ್‌ ಮಸೀದಿ, ಬಂಗ್ಲೆಗುಡ್ಡೆ ಸಲ್ಮಾನ್‌ ಮಸೀದಿ, ಕುಕ್ಕುಂದೂರು, ಕಜೆ, ಬೈಲೂರು, ಎಣ್ಣೆಹೊಳೆ, ಸಾಣೂರು ಸೇರಿದಂತೆ ಕಾರ್ಕಳ ತಾಲೂಕ ಹಾಗೂ ಹೆಬ್ರಿ ತಾಲೂಕಿನ ಮಸೀದಿಯಲ್ಲಿ ಈದ್‌ ಹಬ್ಬ ಆಚರಿಸಿದರು. ಜಾಮೀಯಾ ಮಸೀದಿಯಲ್ಲಿ ಬೆಳಿಗ್ಗೆ ಸಮೂಹ ನಮಾಜ್‌ ನೆರವೇರಿಸಿ, ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಧರ್ಮಗುರು ಮೌಲಾನ ಜಹೀರ್ ಅಹ್ಮದ್ ಖಾಸ್ಮಿ, ಮೂವತ್ತು ದಿನಗಳ ಕಠಿಣ ಉಪವಾಸ ವ್ರತದ ಅನಂತರ ಅಲ್ಲಾಹನಿಂದ ಪ್ರತಿಫಲ ಪಡೆಯುವ ಮಹತ್ವದ ದಿನವಿದು. ನಮ್ಮ ಹೃದಯದಲ್ಲಿರುವ ಕಶ್ಮಲಗಳನ್ನು ತೊರೆದು ಎಲ್ಲರೊಡನೆ ಪ್ರೀತಿ, ವಿಶ್ವಾಸ ಮತ್ತು ತಾಳ್ಮೆಯಿಂದ ಬಾಳುವುದೇ ಹಬ್ಬದ ನಿಜವಾದ ಸಂದೇಶ ಎಂದು ಸಾರಿದರು.
ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಶೀಘ್ರ ಶಮನಗೊಳ್ಳಲಿ. ಅಲ್ಲಿರುವ ನಮ್ಮೆಲ್ಲಾ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವಂತಾಗಲಿ ಎಂದು ಪ್ರಾರ್ಥಿಸಿದರು.









































































































error: Content is protected !!
Scroll to Top