ಎ. 10- 14 : ಅಜೆಕಾರು ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾ ಮಹೋತ್ಸವ – ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಾರ್ಕಳ : ಅಜೆಕಾರು ಪದ್ಮನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾ ಮಹೋತ್ಸವ – ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 10ರಂದು ನೆರವೇರಲಿದೆ.
ಎ. 10ರ ಶುಕ್ರವಾರ ಸಂಜೆ 4 ಗಂಟೆಗೆ ಕುಕ್ಕುಂದೂರು ಗಣಿತನಗರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ವಿಗ್ರಹದ ಭವ್ಯ ಮೆರವಣಿಗೆ, ಸಂಜೆ 5 ಗಂಟೆಗೆ ಅಜೆಕಾರು ಶ್ರೀರಾಮ ಮಂದಿರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹದ ಹಾಗೂ ಹಸಿರುವಾಣಿ ಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಅರುಣ್‌ ಭಟ್‌ ನೇತೃತ್ವದಲ್ಲಿ ವೈದಿಕ ಕಾರ್ಯ ನೆರವೇರಲಿದೆ.
ಎ. 11ರಂದು ಬೆಳಗ್ಗೆ 7ರಿಂದ ಧಾರ್ಮಿಕ ವಿಧಿವಿಧಾನ, ಅಂದು ಸಂಜೆ 7 ಗಂಟೆಯಿಂದ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕಿಗಾನ ವೈಭವ ನಡೆಯಲಿದೆ.
ಎ. 12ರಂದು ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀ ವಿಷ್ಣು ಸಹಸ್ರ ನಾಮ ಪಠಣ ನಡೆಯಲಿದೆ.

ಸಭಾ ಕಾರ್ಯಕ್ರಮ ಬಳಿಕ ಹಿಂದೂಸ್ಥಾನಿ ಗಾಯಕಿ ಕುಮಾರಿ ಆಧ್ಯಾ ಮಲ್ಯ ಅಜೆಕಾರು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಬಳಿಕ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಅಜೆಕಾರು ಬಳಗದಿಂದ ಶ್ರೀ ಗಣೇಶೋದ್ಭವ [ಗಣಪತಿ ವಿಜಯ] ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಎ.13ರಂದು ಶ್ರೀ ರಾಮ ಭಜನಾ ಮಂಡಳಿ ಅಜೆಕಾರು, ಶ್ರೀ ವೆಂಕಟರಮಣ ಭಜನಾ ಮಂಡಳಿ ಕಾರ್ಕಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ಕಡ್ತಲ ತಂಡದಿಂದ ಭಜನೆ ನಡೆಯಲಿದೆ.
ಎ. 14ರಂದು ಶ್ರೀ ಮಹಾಗಣಪತಿ ಭಜನಾ ಮಂಡಳಿ ಗಣಿತನಗರ, ಶ್ರೀ ವೀರ ಮಾರುತಿ ಭಜನಾ ಮಂಡಳಿ ಸಾಗ, ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾಸುಧಾ ಜರುಗಲಿರುವುದು.









































































































error: Content is protected !!
Scroll to Top