ನಂದಳಿಕೆಯ ಪುಷ್ಪ ಅವರಿಗೆ ನೂತನ ಮನೆ ಹಸ್ತಾಂತರ

ಕಾರ್ಕಳ : ಬೊಲ್ಪು ನಾಗರಿಕ ಸೇವಾ ಸಮಿತಿ, ಬಿಜೆಪಿ ಗ್ರಾಮ ಸಮಿತಿ ನಂದಳಿಕೆ, ಕಾರ್ಕಳ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ವಿಕಾಸ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಂದಳಿಕೆಯ ಪುಷ್ಪ ಅವರಿಗೆ ನೂತನ ಮನೆಯನ್ನು ನಿರ್ಮಿಸಿದ್ದು, ಮಾ. 14ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಂದ ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

ಪುಷ್ಪ ಅವರು ಸರಕಾರದ ಆಶ್ರಯ ಯೋಜನೆಯ ನಿರೀಕ್ಷೆಯಲ್ಲಿ ತಮ್ಮ ಹಳೆಯ ಮನೆಯನ್ನು ಕೆಡವಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಇರುವ ಕಾರಣದಿಂದ ಪಂಚಾಗ ಹಂತದಲ್ಲೇ ಮನೆಯ ಕಾಮಗಾರಿ ನಿಂತು ಹೋಯಿತು. ಪರಿಣಾಮವಾಗಿ ಕಳೆದ ಒಂದೂವರೆ ವರ್ಷದಿಂದ ತಮ್ಮ ಹಳೆ ಮನೆಯ ಶೌಚಾಲಯ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಇದನ್ನು ಗಮನಿಸಿದ ಬೊಲ್ಪು ನಾಗರಿಕ ಸೇವಾ ಸಮಿತಿಯವರು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಯುವ ಮೋರ್ಚಾ ಸದಸ್ಯರ ಮೂಲಕ ಶಾಸಕ ಸುನಿಲ್‌ ಕುಮಾರ್‌ ಅವರ ಗಮನಕ್ಕೆ ತಂದರು. ವಿಷಯ ತಿಳಿದ ಶಾಸಕರು ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ನೆರವಾದರು. ಇವರೊಂದಿಗೆ ದಾನಿಗಳ ಸಹಕಾರದಿಂದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡು ಶಾಸಕರು ಪುಷ್ಪ ಅವರಿಗೆ ಮನೆಯನ್ನು ಹಸ್ತಾಂತರಿಸಿದರು.

ಈ ಸಂದರ್ಭ ಬಿಜೆಪಿ ಗ್ರಾಮ ಸಮಿತಿ ನಂದಳಿಕೆ ಅಧ್ಯಕ್ಷ ರಘುರಾಮ ರಾವ್, ಕಾರ್ಕಳ ಮಂಡಲ ಬಿಜೆಪಿ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ತಾಲೂಕು ಬಿಜೆಪಿ ಸದಸ್ಯ ಪ್ರಸಾದ್ ಶೆಟ್ಟಿ ಕಾಡಿಕಮಳ, ಬೆಳ್ಮಣ್ಣು ಶಕ್ತಿ ಕೇಂದ್ರದ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಬೊಲ್ಪು ನಾಗರಿಕ ಸೇವಾ ಸಮಿತಿ ನಿರ್ದೇಶಕ ಮನೋಜ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿತ್ಯಾನಂದ ಅಮಿನ್ ಸೇರಿದಂತೆ ಬೊಲ್ಪು ನಾಗರಿಕ ಸೇವಾ ಸಮಿತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.































error: Content is protected !!
Scroll to Top