ಸಾಲ ವಾಪಾಸ್‌ ಕೇಳಿದಕ್ಕೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಸ್ನೇಹಿತ

ಕಾರ್ಕಳ : ಸ್ನೇಹಿತನಿಗೆ ನೀಡಿದ ಸಾಲದ ಹಣ ವಾಪಾಸ್‌ ಕೇಳಿದಕ್ಕೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಮಾ. 13ರಂದು ಪಡುಬಿದ್ರೆಯಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಬಜಗೋಳಿಯ ಸುಮಿತ್‌ ಎಸ್.‌ ಸುವರ್ಣ ಮತ್ತು ಹೆಜಮಾಡಿ ಗುಂಡಿ ನಿವಾಸಿ ಧೀರಜ್‌ ಸ್ನೇಹಿತರಾಗಿದ್ದು, ಸುಮಿತ್‌ 2 ವರ್ಷಗಳ ಹಿಂದೆ ಆರೋಪಿ ಧೀರಜ್‌ಗೆ 2 ಲಕ್ಷ ರೂ. ಸಾಲ ಕೊಟ್ಟಿದ್ದು, ಅದನ್ನು 6 ತಿಂಗಳಲ್ಲಿ ಹಿಂತಿರುಗಿಸುವುದಾಗಿ ತಿಳಿಸಿದ್ದನು. ಆದರೆ ಈವರೆಗೆ ಹಿಂತಿರುಗಿಸದೇ ಇದ್ದು ಮಾ. 13ರಂದು ಸಾಲದ ಹಣವನ್ನು ಕೇಳಿದಾಗ ಕೋಪಗೊಂಡ ಆರೋಪಿಯು ಸುಮಿತ್‌ ಅವರ ಮೇಲೆ ಹಲ್ಲೆ ಮಾಡಿ ಹೆಜಮಾಡಿ ಸ್ಟೇಡಿಯಂ ಬಳಿಯ ಬಬ್ಬು ಸ್ವಾಮಿ ದೇವಸ್ಥಾನದ ಸಮೀಪ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸುಮಿತ್‌ ಅವರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಧೀರಜ್‌ನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.































error: Content is protected !!
Scroll to Top