ಎ. 3 : ಬಸ್ರಿ ಬೈಲೂರು ಶಾಲೆಯಲ್ಲಿ ಉದಯೋತ್ಸವ

ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಶಾಲೆಯಲ್ಲಿ 40 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಉದಯ ಕುಮಾರ್ ಶೆಟ್ಟಿಯವರಿಗೆ ಗೌರವಾರ್ಥವಾಗಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ಏ. 3ರಂದು ಶಾಲೆಯಲ್ಲಿ ಉದಯೋತ್ಸವ ಕಾರ್ಯಕ್ರಮ ನಡೆಯಲಿದೆ. ಮಾ. 14ರಂದು ಶಾಲೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಎ. 3ರಂದು ಬೆಳಿಗ್ಗೆ 8.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜಾರ್ಕಳ ಪೇಟೆಯಿಂದ ಬಸ್ರಿ ಬೈಲೂರು ಶಾಲೆಯವರೆಗೆ ಮೆರವಣಿಗೆ ನಡೆಯಲಿದೆ. 10.30ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಬಾಲ ಕಲಾವಿದರಿಂದ ವೀರ ಅಭಿಮನ್ಯು ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ರಾತ್ರಿ 7.30ಕ್ಕೆ ಸಂಧ್ಯಾ ಸೌರಭ – ವೇದಿಕೆ ಸಂಭ್ರಮ ನಡೆಯಲಿದೆ. 9.30ಕ್ಕೆ ಪಡೀಲ್‌, ಕಾಪಿಕಾಡ್‌, ವಾಮಂಜೂರು ಹಾಗೂ ಸಾಯಿಕೃಷ್ಣ ಸಮಾಗಮದೊಂದಿಗೆ ಚಾ ಪರ್ಕ ಕಲಾವಿದರು ಕುಡ್ಲ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಯಾನೊರಿ ಬರೊಲಿಯಾ ಪ್ರದರ್ಶನಗೊಳ್ಳಲಿದೆ.









































































































error: Content is protected !!
Scroll to Top