ಕರ್ನಾಟಕ ಬಾಡಿಗೆ ಕಾಯ್ದೆ – 1999

ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಮನೆ, ಅಂಗಡಿ ಅಥವಾ ಇನ್ನಿತರ ವ್ಯವಹಾರ ಅಥವಾ ಸೇವೆಗೆ ಸಂಬಂಧಪಟ್ಟ ಕಚೇರಿಯ ಕೋಣೆ ಅಥವಾ ಕಟ್ಟಡಕ್ಕೆ ಸಂಬಂಧ ಪಟ್ಟಂತೆ ಬಾಡಿಗೆಯನ್ನು ನಿಯಂತ್ರಿಸುವ, ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಹಾಗೂ ಬಾಡಿಗೆದಾರರನ್ನು ಕಟ್ಟಡದಿಂದ ಕಾನೂನು ಬಾಹಿರವಾಗಿ ಮತ್ತು ಬಲತ್ಕಾರವಾಗಿ ಒಕ್ಕಲೆಬ್ಬಿಸುವುದನ್ನು ತಡೆಯುವ ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಉದ್ದೇಶದಿಂದ ಕರ್ನಾಟಕ ಬಾಡಿಗೆ ಕಾಯ್ದೆ, 1999 ಎಂಬ ಕಾನೂನು ನಮ್ಮ ಕರ್ನಾಟಕ ರಾಜ್ಯದಲ್ಲಿ 31-12-2001ರಿಂದ ಜಾರಿಯಲ್ಲಿ ಇರುತ್ತದೆ.

ಈ ಕಾಯ್ದೆಯ ಪ್ರಕಾರ ಕರ್ನಾಟಕ ರಾಜ್ಯದ ವ್ಯಾಪ್ತಿ ಪ್ರದೇಶದ ಒಳಗಿನ ಮನೆ, ಅಂಗಡಿ ಅಥವಾ ಇನ್ನಿತರ ವ್ಯವಹಾರ ಅಥವಾ ಸೇವೆಗೆ ಸಂಬಂಧಪಟ್ಟ ಕಚೇರಿಯ ಕೋಣೆ ಅಥವಾ ಕಟ್ಟಡವನ್ನು ಬಾಡಿಗೆಗೆ ನೀಡುವ ಅಥವಾ ಸಂದರ್ಭದಲ್ಲಿ ಕಡ್ಡಾಯವಾಗಿ ಕಟ್ಟಡದ ಮಾಲೀಕ ಮತ್ತು ಬಾಡಿಗೆದಾರರ ನಡುವೆ ಲಿಖಿತವಾದ ಬಾಡಿಗೆ ಒಪ್ಪಂದ ಅಥವಾ ಕರಾರನ್ನು ಮಾಡಬೇಕಾಗಿರುತ್ತದೆ ಮಾತ್ರವಲ್ಲದೆ ಇಂತಹ ಒಪ್ಪಂದ ಅಥವಾ ಕರಾರಿನಲ್ಲಿ ಕರಾರು ಆದ ದಿನಾಂಕ, ಕಟ್ಟಡ ಅಥವಾ ಕೋಣೆಗೆ ಸಂಬಂಧಪಟ್ಟ ಬಾಡಿಗೆ ಮೊತ್ತ, ಬಾಡಿಗೆಯ ಅವಧಿ, ಕಟ್ಟಡ ಅಥವಾ ಕೋಣೆಯ ವಿವರ ಮತ್ತು ಬಾಡಿಗೆ ಒಪ್ಪಂದಕ್ಕೆ ಸಂಬಂಧಪಟ್ಟ ಪಕ್ಷಕಾರರ ಸಂಪೂರ್ಣ ಹೆಸರು ಮತ್ತು ವಿಳಾಸ ಮತ್ತು ಪಕ್ಷಕಾರರು ಒಪ್ಪಿಕೊಂಡಂತಹ ಇತರ ಷರತ್ತುಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಬಾಡಿಗೆದಾರರು ಬಾಡಿಗೆ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸದ ಹೊರತು ಹಾಗೂ ಬಾಡಿಗೆ ಕರಾರಿಗೆ ಸಂಬಂಧಪಟ್ಟ ಕಟ್ಟಡ ಅಥವಾ ಕೋಣೆಯು ಮಾಲೀಕರಿಗೆ ಅಗತ್ಯವಿರದ ಸಂದರ್ಭದಲ್ಲಿ ಕಟ್ಟಡ ಮಾಲೀಕರು ಅಕ್ರಮವಾಗಿ ಮತ್ತು ಬಲಾತ್ಕಾರವಾಗಿ ಬಾಡಿಗೆದಾರರನ್ನು ಕಟ್ಟಡದಿಂದ ಹೊರಹಾಕುವಂತಿಲ್ಲ. ಮಾತ್ರವಲ್ಲದೆ ಕಟ್ಟಡ ಮಾಲೀಕರು ಬೇಕಾಬಿಟ್ಟಿಯಾಗಿ ಅನಿಯಮಿತ ಮೊತ್ತದ ಠೇವಣಿಗಳನ್ನು ಬಾಡಿಗೆದಾರದಿಂದ ವಸೂಲಿ ಮಾಡುವಂತಿಲ್ಲ ಹಾಗೂ ಮಿತಿಮೀರಿದ ಶುಲ್ಕಗಳನ್ನು ಬಾಡಿಗೆದಾರರಿಂದ ವಸೂಲಿ ಮಾಡುವಂತಿಲ್ಲ. ಮಾತ್ರವಲ್ಲದೆ ಕಟ್ಟಡ ಮಾಲೀಕರು ಬಾಡಿಗೆದಾರರನ್ನು ಕಟ್ಟಡದಿಂದ ಅಕ್ರಮವಾಗಿ ಹೊರದಬ್ಬುವ ಉದ್ದೇಶಕ್ಕಾಗಿ ಬಾಡಿಗೆದಾರರು ಉಪಯೋಗಿಸಿಕೊಂಡು ಬರುವ ನೀರು, ವಿದ್ಯುತ್ ಅಥವಾ ಇತರ ಅಗತ್ಯ ಸೇವೆಗಳನ್ನು ಕಡಿತಗೊಳಿಸುವಂತಿಲ್ಲ. ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರ ವಾಸ್ತವ್ಯ ಉದ್ದೇಶದ ಕಟ್ಟಡಕ್ಕೆ ಭದ್ರತಾ ಠೇವಣಿಯಾಗಿ ಗರಿಷ್ಠ 10 ತಿಂಗಳ ಬಾಡಿಗೆ, ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ ಭದ್ರತಾ ಠೇವಣಿಯಾಗಿ ಗರಿಷ್ಠ 12 ತಿಂಗಳ ಬಾಡಿಗೆಯನ್ನು ಕಟ್ಟಡದ ಮಾಲೀಕರು ಬಾಡಿಗೆದಾರರಿಂದ ಪಡೆಯಬಹುದಾಗಿದೆ. ಕಟ್ಟಡ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ವಿವಾದ ಉಂಟಾಗಿ ಕಟ್ಟಡ ಮಾಲೀಕರು ಬಾಡಿಗೆಯನ್ನು ಸ್ವೀಕರಿಸಲು ನಿರಾಕರಿಸಿದರೆ, ಬಾಡಿಗೆದಾರರು ತಾವು ಕಟ್ಟಡ ಮಾಲೀಕರಿಗೆ ನ್ಯಾಯ ಬದ್ಧವಾಗಿ ನೀಡಬೇಕಾಗಿರುವ ಬಾಡಿಗೆಯನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಠೇವಣಿ ಇಡಬಹುದಾಗಿದೆ.

































































































error: Content is protected !!
Scroll to Top