ಸ್ಕೂಟಿಯಿಂದ ಬಿದ್ದ ಹಿಂಬದಿ ಸವಾರೆ – ಆಸ್ಪತ್ರೆ ದಾಖಲು

ಕಾರ್ಕಳ : ಸ್ಕೂಟಿಯಿಂದ ಬಿದ್ದು ಹಿಂಬದಿ ಸವಾರೆ ಗಾಯಗೊಂಡಿರುವ ಘಟನೆ ಫೆ. 28ರಂದು ಸಾಣೂರಿನಲ್ಲಿ ನಡೆದಿದೆ. ರಾಜು ಎಂಬವರು ಸ್ಕೂಟಿಯಲ್ಲಿ ಪೂರ್ಣೀಮಾ ಎಂಬುವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್‌ ಸಮೀಪ ವಿಶಾಲ್‌ ಗ್ಯಾರೇಜ್‌ ಬಳಿ ಸಾಗುತ್ತಿದ್ದಾಗ ಪೂರ್ಣೀಮಾ ಅವರು ಹಿಮ್ಮುಖವಾಗಿ ರಸ್ತೆಯ ಮೇಲೆ ಬಿದ್ದಿದ್ದು, ಪರಿಣಾಮವಾಗಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ಸ್ಕೂಟಿ ಸವಾರ ರಾಜುರವರ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top